ಢಾಕಾ/ಸಿಯೋಲ್,27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ತಮ್ಮ ರಾಜಕೀಯ ಹಾಗೂ ಆರ್ಥಿಕ ಸಂಬಂಧಗಳನ್ನು ಬಲಪಡಿಸಿ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸಲು ಒಪ್ಪಿಕೊಂಡಿವೆ. ಸಿಯೋಲ್‌ನಲ್ಲಿ ನಡೆದ ನಾಲ್ಕನೇ ವಿದೇಶಾಂಗ ಸಮಾಲೋಚನೆ ವೇಳೆ ಈ ನಿರ್ಧಾರ ಕೈಗೊಳ್ಳಲಾಯಿತು.
ಕೊರಿಯಾ ಬಾಂಗ್ಲಾದೇಶದ ಐದನೇ ಅತಿದೊಡ್ಡ ಹೂಡಿಕೆದಾರವಾಗಿದ್ದು, ಸ್ಯಾಮ್‌ಸಂಗ್ ಸೇರಿದಂತೆ 200ಕ್ಕೂ ಹೆಚ್ಚು ಕಂಪನಿಗಳು ಅಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿನಿಧಿಗಳು ವ್ಯಾಪಾರ, ಮೂಲಸೌಕರ್ಯ, ಇಂಧನ, ವಿಜ್ಞಾನ-ತಂತ್ರಜ್ಞಾನ, ಎಐ ಹಾಗೂ ರೋಹಿಂಗ್ಯಾ ಸಮಸ್ಯೆಗಳ ಕುರಿತಂತೆ ಈ ವೇಳೆ ಚರ್ಚಿಸಿದರು.
ಕೊರಿಯಾ ಬಾಂಗ್ಲಾದೇಶದ ಮೂಲಸೌಕರ್ಯ ಯೋಜನೆಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿ, ರೋಹಿಂಗ್ಯಾಗಳಿಗೆ ಆತಿಥ್ಯ ವಹಿಸಿರುವ ಬಾಂಗ್ಲಾದೇಶದ ಮಾನವೀಯ ಪಾತ್ರವನ್ನು ಶ್ಲಾಘಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa