ಕೋಲಾರ, ೧೮ಆಗಸ್ಟ್ (ಹಿ.ಸ.) :
ಆ್ಯಂಕರ್ : ಲೋಕಅದಾಲತ್ ನಲ್ಲಿ ಕೋಲಾರ ಜಿಲ್ಲೆಯಲ್ಲೇ ಕೆಜಿಎಫ್ ನ್ಯಾಯಾಲಯವು ಪ್ರಥಮ ಸ್ಥಾನಕ್ಕೆ ಏರಿಸುವ ನಿಟ್ಟಿನಲ್ಲಿ ವಕೀಲರು ಕಕ್ಷಿದಾರರು ಸಹಕರಿಸಬೇಕು ಎಂದು ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಹೇಳಿದರು.
ಕೆಜಿಎಫ್ ನಗರದ ನ್ಯಾಯಾಲಯ ಅವರಣದಲ್ಲಿರುವ ಕುಸುಮ ಸಭಾಂಗಣದಲ್ಲಿ ಅಯೋಜಿಸಿದ್ದ ಲೋಕಅದಲಾತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ರಾಷ್ಟ್ರೀಯ ಲೋಕಾಅದಾಲತ್ ಮುಂದಿನ ತಿಂಗಳು ೧೩ ರಂದು ಅಯೋಜಿಸಲಾಗುತ್ತಿದ್ದು ಚೆಕ್ ಬೌನ್ಸ್ ಕೇಸ್ ಹಾಗೂ ಕುಟುಂಭ ವ್ಯಾಜ್ಯ ಸೇರಿದಂತೆ ವಿವಿಧ ಪ್ರಕರಣಗಳನ್ನು ಲೋಕಅದಾಲತ್ನಲ್ಲಿ ಭಗೆಹರಿಸಿಕೊಳ್ಳಲು ಅವಕಾಶವಿರುವುದರಿಂದ ವಕೀಲರು ಕಕ್ಷಿದಾರರು ಸಹಕರಿಸಬೇಕು ಕಕ್ಷಿದಾರರು ಹೈಕೋರ್ಟ್ನಲ್ಲಿ ಕೇಸ್ ಮುಂದುವರೆಸಿದರೆ ಸಮಸ್ಯೆ ಬಗೆಹರಿಸಲು ವರ್ಷಗಳೇ ಕಳೆದು ಹೋಗಲಿದೆ ಆದ್ದರಿಂದ ಚೆಕ್ ಬೌನ್ಸ್ ಕೇಸ್ಗಳಲ್ಲಿ ಹಣ ನೀಡಿದವರಿಗೂ ಹಣ ಪಡೆದವರ ಮಧ್ಯೆ ವಿಚಾರಗಳು ತಿಳಿದಿರುತ್ತದೆ ಆದ್ದರಿಂದ ವಿನಾಕಾರಣವಾಗಿ ನ್ಯಾಯಾಲಯಗಳಲ್ಲಿ ಪ್ರಕರಣ ಮುಂದುವರೆಸುವುದನ್ನು ಬಿಟ್ಟು ಪ್ರಕರಣ ಇತ್ಯಾರ್ಥ ಪಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನ್ಯಾಯಾಧೀಶರಾದ ಜಯಲಕ್ಷ್ಮಿ ಮಾತನಾಡಿ ವಕೀಲರು ಹಾಗೂ ಕಕ್ಷಿದಾರರು ಪ್ರಥಮವಾಗಿ ಲೋಕಅದಾಲತ್ನ ಮಹತ್ವನ್ನು ಅರಿತುಕೊಳ್ಳಬೇಕು ಲೋಕಾಅದಾಲತ್ನ ಉಪಯೋಗವನ್ನು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನ್ಯಾಯಾಧೀಶರಾದ ವಿನೋಧಕುಮಾರ್ ಮಾತನಾಡಿ ಲೋಕಾಅದಾಲತ್ ಮೂಲಕ ಹಲವು ಪ್ರಕರಣಗಳನ್ನು ಇತ್ಯಾರ್ಥ ಪಡಿಸಲಾಗಿದ್ದು ಆದೇ ರೀತಿ ವಕೀಲರು ಕಕ್ಷಿದಾರರ ಮನವೂಲಿಸುವ ಮೂಲಕ ಪ್ರಕರಣವನ್ನು ಇತ್ಯಾರ್ಥಪಡಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲ್ಗೌಡ ಮಾತನಾಡಿ ವಕೀಲರು ಲೋಕಾಅದಾಲತ್ ಯಶಸ್ವಿಗೊಳಿಸಲು ಸದಾ ಸಿದ್ದರಿದ್ದು ಕೆಜಿಎಫ್ ನಗರದಲ್ಲಿ ಎಲ್ಲರು ಬಡವರಿದ್ದು ಚೆಕ್ ಬೌನ್ಸ್ ಕೇಸ್ಗಳಲ್ಲಿ ಪಾರ್ಟಿ ಹಣ ಪಾವತಿ ನೀಡಲು ಅವಕಾಶವನ್ನು ನೀಡಬೇಕು ಎಂದು ಮನವಿ ಮಾಡಿದರು.
ಲೋಕಅದಾಲತ್ ಪೂರ್ವಭಾವಿ ಸಭೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಮಗಿ, ಸುಂದರರಾಮರೆಡ್ಡಿ ಹಾಗೂ ಇತರರು ಹಾಜರಿದ್ದರು.
ಚಿತ್ರ : ಕೆಜಿಎಫ್ ನಗರದ ನ್ಯಾಯಾಲಯ ಅವರಣದಲ್ಲಿರುವ ಕುಸುಮ ಸಭಾಂಗಣದಲ್ಲಿ ಅಯೋಜಿಸಿದ್ದ ಲೋಕ್ಅದಲಾತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್