ವಿಜಯಪುರ, 18 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಾಗಲಕೋಟ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ಮಳೆ ನೀರು ಜಮೀನುಗಳಿಗೆ ಹರಿದಿದ್ದು, ಬೆಳೆ ಹಾನಿಯುಂಟಾಗಿದೆ.
ಇನ್ನೊಂದು ಕಡೆ ಮಳೆ ಅಬ್ಬರದಿಂದ ಮಣ್ಣಿನ ಮನೆಗಳು ಕುಸಿದಿವೆ. ಕೆಲವು ಅವಾಂತರಗಳು ಸೃಷ್ಟಿಯಾಗಿವೆ.
ಮುಧೋಳ ತಾಲೂಕಿನ ಲೋಕಾಪುರ ಗ್ರಾಮದ ವಾರ್ಡ್ ನಂ.1ರ ಪಿಂಜಾರ ಓಣಿಯನ ಸುಮಾರು 50 ವರ್ಷದ ರುಕ್ಮೀಣಿ ಪಾಂಡುರಂಗ ಪೇಟಕರ್ ಅವರಮಣ್ಣಿನ ಮೇಲ್ಮುದ್ದಿ ಮನೆ ಛಾವಣಿ ಕುಸಿದು ಪಾತ್ರ ಪಗಡ, ದವಸ ಧಾನ್ಯ ಚಲ್ಲಾಪಿಲ್ಲಿಯಾಗಿ ಮಳೆ ನೀರು ಹರಿದಿದೆ. ಒಟ್ಟಿನಲ್ಲಿ ಮಳೆ ಅವಾಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande