ನವದೆಹಲಿ, 04 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ರಾಷ್ಟ್ರಧ್ವಜ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಪಿಂಗಲಿ ವೆಂಕಯ್ಯ ಅವರ ಪುಣ್ಯತಿಥಿಯಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಪಿಂಗಲಿ ವೆಂಕಯ್ಯ ರಾಷ್ಟ್ರಧ್ವಜವನ್ನು ರೂಪಿಸುವ ಹಿಂದೆ ವಿಶ್ವದ ಧ್ವಜಗಳ ಅಧ್ಯಯನ ನಡೆಸಿದ್ದು, ಸುಮಾರು 30 ವಿನ್ಯಾಸಗಳನ್ನು ಸಿದ್ಧಪಡಿಸಿದ್ದರು. ತ್ರಿವರ್ಣ ಧ್ವಜವು ಭಾರತದ ಏಕತೆ, ಸಮಗ್ರತೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ಪಿಂಗಲಿ ಅವರು ಶಿಕ್ಷಣತಜ್ಞ, ಭಾಷಾಶಾಸ್ತ್ರಜ್ಞ ಮತ್ತು ಮಿಲಿಟರಿ ಅಧಿಕಾರಿ ಆಗಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಅವರ ಪುಣ್ಯತಿಥಿಯಲ್ಲಿ ದೇಶದಾದ್ಯಂತ ಅವರ ಸ್ಮರಣೆಗೆ ಗೌರವ ಸಲ್ಲಿಸಲಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa