ಕಾಶ್ಮೀರ ಸೇಬು ಉತ್ಕೃಷ್ಟತೆಗೆ 150 ಕೋಟಿ ರೂ. ವೆಚ್ಚದಲ್ಲಿ ಕ್ಲೀನ್ ಪ್ಲಾಂಟ್ ಸೆಂಟರ್ – ಕೃಷಿ ಸಚಿವ ಶಿವರಾಜ್ ಸಿಂಗ್
ಶ್ರೀನಗರ, 04 ಜುಲೈ (ಹಿ.ಸ.) : ಆ್ಯಂಕರ್ : ಕಾಶ್ಮೀರದಲ್ಲಿ ಸೇಬು ಉತ್ಪಾದನೆಯ ಗುಣಮಟ್ಟ ಮತ್ತು ಪರಿಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ₹150 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛ ಸಸ್ಯ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಉತ್ತಮ
ಕಾಶ್ಮೀರ ಸೇಬು ಉತ್ಕೃಷ್ಟತೆಗೆ 150 ಕೋಟಿ ರೂ. ವೆಚ್ಚದಲ್ಲಿ ಕ್ಲೀನ್ ಪ್ಲಾಂಟ್ ಸೆಂಟರ್ – ಕೃಷಿ ಸಚಿವ ಶಿವರಾಜ್ ಸಿಂಗ್


ಶ್ರೀನಗರ, 04 ಜುಲೈ (ಹಿ.ಸ.) :

ಆ್ಯಂಕರ್ : ಕಾಶ್ಮೀರದಲ್ಲಿ ಸೇಬು ಉತ್ಪಾದನೆಯ ಗುಣಮಟ್ಟ ಮತ್ತು ಪರಿಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ₹150 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛ ಸಸ್ಯ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಉತ್ತಮ ಗುಣಮಟ್ಟದ ಸೇಬು ಸಸ್ಯಗಳ ಕೊರತೆಯನ್ನು ನಿಭಾಯಿಸಲು ಈ ಕೇಂದ್ರ ಸಹಕಾರಿಯಾಗಲಿದೆ. ಹೆಚ್ಚಿನ ಸಾಂದ್ರತೆಯ ಸೇಬು ಉತ್ಪಾದನೆಯಿಂದ ಆರು ಪಟ್ಟು ಹೆಚ್ಚು ಇಳುವರಿ ಸಾಧ್ಯವಿದ್ದು, ಭಾರತವು ಸೇಬುಗಳನ್ನು ಹೊರದೇಶಗಳಿಂದ ಆಮದು ಮಾಡುವ ಅಗತ್ಯವಿಲ್ಲದ ಮಟ್ಟಿಗೆ ಆತ್ಮನಿರಭರವಾಗಬಹುದು. ಜಮ್ಮು-ಕಾಶ್ಮೀರದ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande