ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಸಿದ್ದತೆಗಾಗಿ ಸೂಚನೆ
ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಸಿದ್ದತೆಗಾಗಿ ಸೂಚನೆ
ಕೋಲಾರ ತಾಲ್ಲೂಕಿನ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಕಚೇರಿ.


ಕೋಲಾರ,೦೩ ಜುಲೈ (ಹಿ.ಸ) :

ಆ್ಯಂಕರ್ : ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳಲು ಸೂಚಿಸಿರುವ ರಾಜ್ಯ ಚುನಾವಣಾ ಆಯೋಗ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಸಿದ್ದತೆಗೂ ಕೋಲಾರದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಈ ಸಂಬ0ಧ ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಆಯೋಗ ಹೊಸದಾಗಿ ರಚನೆಯಾಗಿರುವ ಜಿಲ್ಲೆಯ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿಗೆ ಈಗಾಗಲೇ ರಾಜ್ಯ ಸರ್ಕಾರ ವಾರ್ಡುವಾರು ಮೀಸಲಾತಿ ನಿಗಧಿಗೊಳಿಸಿ ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಹೊರಡಿಸಿರುವ ಹಿನ್ನಲೆಯಲ್ಲಿ ಚುನಾವಣೆಗೆ ಆಯೋಗ ಮುಂದಾಗಿದೆ.

ಈ ಸಂಬ0ಧ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗ ಉದ್ದೇಶಿದ್ದು, ಚುನಾವಣೆಗಾಗಿ ಅಗತ್ಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಅದರಂತೆ ಮತದಾರರ ಪಟ್ಟಿ ತಯಾರಿಕೆಗೆ ಆಯೋಗದಿಂದ ಪ್ರತ್ಯೇಕವಾಗಿ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದೆ. ಉಳಿದಂತೆ ಮತದಾನ ಕೇಂದ್ರಗಳ ಭೌತಿಕ ಪರಿಶೀಲನೆ ನಡೆಸಿ ಕೇಂದ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೂಡಲೇ ಅಂಕಿ ಅಂಶಗಳೊAದಿಗೆ ಮತದಾನ ಕೇಂದ್ರಗಳ ಪಟ್ಟಿಯ ವಿವರವನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಚುನಾವಣೆ ನಡೆಯುವ ವಾರ್ಡುಗಳ ಮತಗಟ್ಟೆಗಳ ಅನುಸಾರ ಮತದಾನ ಸಿಬ್ಬಂದಿಗಳ ನೇಮಕ ಮತ್ತು ಅವರಿಗೆ ತರಬೇತಿ ನೀಡಲು ಅಗತ್ಯ ಕ್ರಮವಹಿಸಲು ಆಯೋಗ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲೆಕ್ಟಾçನಿಕ್ ಮತಯಂತ್ರಗಳ ಸಂಗ್ರಹಣೆ ಮಾಡಲು ಸೂಚಿಸಿರುವ ಆಯೋಗ ಯಂತ್ರಗಳು ಜಿಲ್ಲೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಆಯೋಗಕ್ಕೆ ಮಾಹಿತಿ ಒದಗಿಸಿ ಅಗತ್ಯವಾದಲ್ಲಿ ಇತರೆ ಜಿಲ್ಲೆಗಳಿಂದ ಎತ್ತುವಳಿ ಮಾಡುವಂತೆ ಆಯೋಗ ಸೂಚನೆ ನೀಡಲಿದೆ ಎಂದು ತಿಳಿಸಲಾಗಿದೆ.

ಪ್ರತಿ ೧೦ ವಾರ್ಡುಗಳಿಗೆ ಒಬ್ಬರಂತೆ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಲು ಆಯೋಗ ಸೂಚಿಸಿದ್ದು,ಜತೆಗೆ ಒಬ್ಬ ಸಹಾಯಕ ಚುನಾವಣಾಧಿಕಾರಿಯನ್ನು ನೇಮಕ ಮಾಡಲು ಕೂಡಲೇ ಪಟ್ಟಿ ತಯಾರಿಸಿ ಆಯೋಗದ ಅನುಮೋದನೆಗೆ ಸಲ್ಲಿಸಲು ಸೂಚಿಸಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ವಿವರಗಳನ್ನು ಚುನಾವಣಾಧಿಕಾರಿಗಳ ಮೂಲಕ ಆಯೋಗಕ್ಕೆ ಸಲ್ಲಿಸಬೇಕು, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳನ್ನು ಪರಿಶೀಲಿಸಲು ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸಬೇಕು ಎಂದು ತಿಳಿಸಲಾಗಿದೆ.

ಚುನಾವಣಾ ಕಾರ್ಯಕ್ಕೆ ಅಗತ್ಯವಾದ ಪ್ರಪತ್ರ,ನಮೂನೆಗಳು, ಲಕೋಟೆ, ಸೀಲಿಂಗ್ ವ್ಯಾಕ್ಸ್, ಇಂಡೆಲಿಬಲ್ ಇಂಕ್ ಇತ್ಯಾಧಿಗಳ ಮಾಹಿತಿಯನ್ನು ಆಯೋಗಕ್ಕೆ ಒದಗಿಸಲು ಸೂಚಿಸಿದೆ ಮತ್ತು ಜಿಲ್ಲಾಧಿಕಾರಿಗಳ ಈ ಸಾರ್ವತ್ರಿಕ ಚುನಾವಣೆಯ ಸಿದ್ದತೆಗಳ ಕುರಿತು ವೈಯಕ್ತಿಕವಾಗಿ ಗಮನಹರಿಸಿ ಸೂಚಿಸಿರುವ ಕ್ರಮಗಳನ್ನು ಕೈಗೊಂಡು ಒಂದು ವಾರದೊಳಗೆ ಆಯೋಗಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಚಿತ್ರ ;ಕೋಲಾರ ತಾಲ್ಲೂಕಿನ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಕಚೇರಿ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande