ಕನಕ ಗುರು ಪೀಠ ಶಾಖಾ ಮಠದಲ್ಲಿ ಭಕ್ತ ಭಂಡಾರ ಕುಟೀರ
ಬೆಂಗಳೂರು, 03 ಜುಲೈ (ಹಿ.ಸ.) : ಆ್ಯಂಕರ್ : ಕಾಗಿನಲೆ ಕನಕ ಗುರು ಪೀಠದ ಕೇತೊಹಳ್ಳಿ ಶಾಖಾ ಮಠದಲ್ಲಿ ನಿರ್ಮಿತವಾದ ಭಕ್ತ ಭಂಡಾರ ಕುಟೀರ ಉದ್ಘಾಟನೆ ಜುಲೈ 5 ಮತ್ತು 6 ರಂದು ನಡೆಯಲಿದೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ. ಜುಲೈ 5ರಂದು ಧಾರ್ಮಿಕ ಸಭೆ ಹಾಗೂ ಗುರು ಪ್ರವೇಶ ನಡೆಯಲಿದ್ದು, ಜುಲ
Kutira


ಬೆಂಗಳೂರು, 03 ಜುಲೈ (ಹಿ.ಸ.) :

ಆ್ಯಂಕರ್ : ಕಾಗಿನಲೆ ಕನಕ ಗುರು ಪೀಠದ ಕೇತೊಹಳ್ಳಿ ಶಾಖಾ ಮಠದಲ್ಲಿ ನಿರ್ಮಿತವಾದ ಭಕ್ತ ಭಂಡಾರ ಕುಟೀರ ಉದ್ಘಾಟನೆ ಜುಲೈ 5 ಮತ್ತು 6 ರಂದು ನಡೆಯಲಿದೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.

ಜುಲೈ 5ರಂದು ಧಾರ್ಮಿಕ ಸಭೆ ಹಾಗೂ ಗುರು ಪ್ರವೇಶ ನಡೆಯಲಿದ್ದು, ಜುಲೈ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್, ಜಯೇಂದ್ರಪುರಿ ಸ್ವಾಮೀಜಿ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.

ಸುಮಾರು ₹6 ಕೋಟಿ ವೆಚ್ಚದಲ್ಲಿ ನಿರ್ಮಿತ ಈ ಮೂರು ಅಂತಸ್ತಿನ ಮಠದಲ್ಲಿ ಸತ್ಸಂಗ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಭಾಪತಿ ರಘುನಾಥ್ ರಾವ್ ಮಲಕಾಪೂರೆ, ಬಂಡೆಪ್ಪ ಕಾಶಂಪೂರ್, ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande