ದ್ರಾಸ್, 26 ಜುಲೈ (ಹಿ.ಸ.) :
ಆ್ಯಂಕರ್ : 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಸೈನಿಕರ ಸ್ಮರಣಾರ್ಥವಾಗಿ ಶನಿವಾರ 26ನೇ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಜಮ್ಮು ಕಾಶ್ಮೀರದ ಡ್ರಾಸ್‌ನಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಗೌರವ ಸಲ್ಲಿಸಿದರು.
ಭೀಮಭಟ್‌ನ ಓಲ್ಡ್ ಹಾರ್ಸ್ ಪೋಲೋ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ, ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್ ಹಾಗೂ ಎಲ್‌ಎಎಚ್‌ಡಿಸಿ ಅಧ್ಯಕ್ಷ ಡಾ. ಮೊಹಮ್ಮದ್ ಜಾಫರ್ ಅಖುನ್ ಭಾಗವಹಿಸಿದರು. ನೂರಾರು ಎನ್‌ಸಿಸಿ, ಎನ್‌ಎಸ್‌ಎಸ್ ಕಾಡೆಟ್‌ಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಯುವಕರು ಬಲಿಷ್ಠ ಭಾರತ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದು ಡಾ. ಮಾಂಡವಿಯಾ ಕರೆ ನೀಡಿದರು.
ಟೈಗರ್ ಹಿಲ್‌ಗೆ ಇತ್ತೀಚೆಗಿನ ಭೇಟಿಯನ್ನು ಸ್ಮರಿಸಿಕೊಂಡ ಅವರು, ಯೋಧರ ಬದ್ಧತೆ ಮತ್ತು ದೇಶಭಕ್ತಿಯನ್ನು ಶ್ಲಾಘಿಸಿದರು. ನಾವು ಯುದ್ಧ ಆರಂಭಿಸುವುದಿಲ್ಲ ಆದರೆ ಪ್ರಚೋದನೆ ಬಂದಾಗ ಧೈರ್ಯದಿಂದ ಪ್ರತಿಕ್ರಿಯಿಸುತ್ತೇವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa