ಮುಂಬಯಿ, 26 ಜುಲೈ (ಹಿ.ಸ.) :
ಆ್ಯಂಕರ್ : ಯೆಸ್ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮುಂಬೈ ಮೂಲದ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮೂರನೇ ದಿನವೂ ಮುಂದುವರಿದಿದೆ.
2017-2019ರ ಅವಧಿಯಲ್ಲಿ ಯೆಸ್ ಬ್ಯಾಂಕ್ ನಿಂದ ಪಡೆದ ಸುಮಾರು 3,000 ಕೋಟಿ ರೂ. ಸಾಲವನ್ನು ಶೆಲ್ ಕಂಪನಿಗಳ ಮೂಲಕ ಬೇರೆಡೆಗೆ ವರ್ಗಾಯಿಸಿದ ಆರೋಪ ಹಿನ್ನೆಲೆಯಲ್ಲಿದೆ.
ಇಡಿಯ ಪ್ರಾಥಮಿಕ ತನಿಖೆಯಲ್ಲಿ ಲಂಚದ ಆಧಾರಗಳು ಹಾಗೂ ಹಣ ವರ್ಗಾವಣೆ ಸಾಕ್ಷ್ಯಗಳು ಸಿಕ್ಕಿವೆ. ಕಂಪನಿಯ ಇತರ ಶಾಖೆಗಳ ಮೇಲೆ ದಾಳಿ ನಡೆದರೂ ಅನಿಲ್ ಅಂಬಾನಿ ಅವರ ನಿವಾಸದ ಮೇಲೆ ದಾಳಿ ನಡೆದಿಲ್ಲ.
ಈ ಕುರಿತು ರಿಲಯನ್ಸ್ ಗ್ರೂಪ್ ಸ್ಪಷ್ಟಪಡಿಸಿದ್ದು, ಈ ದಾಳಿಗಳು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದ್ದು, ಪ್ರಸ್ತುತ ಕಂಪನಿಗಳಿಗೆ ನೇರ ಸಂಪರ್ಕವಿಲ್ಲವೆಂದು ಹೇಳಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa