ಮಣಿಪುರದಲ್ಲಿ ಭದ್ರತಾ ಪಡೆಗಳಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ
ಇಂಫಾಲ್, 26 ಜುಲೈ (ಹಿ.ಸ.) : ಆ್ಯಂಕರ್ : ಮಣಿಪುರದ ಕಣಿವೆ ಜಿಲ್ಲೆಗಳ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 90 ಅಕ್ರಮ ಬಂದೂಕುಗಳು ಹಾಗೂ 728 ಮದ್ದುಗುಂಡುಗಳು ಸೇರಿದಂತೆ ಯುದ್ಧ ಸಾಮಗ್ರಿಗಳು ಪತ್ತೆಯಾಗಿವೆ. ಮಣಿಪುರ ಪೊಲೀಸರು, ಸೇನೆ, ಸಿಆರ್‌ಪಿಎಫ್, ಬಿಎಸ್‌ಎಫ್ ಮ
Arams


ಇಂಫಾಲ್, 26 ಜುಲೈ (ಹಿ.ಸ.) :

ಆ್ಯಂಕರ್ : ಮಣಿಪುರದ ಕಣಿವೆ ಜಿಲ್ಲೆಗಳ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 90 ಅಕ್ರಮ ಬಂದೂಕುಗಳು ಹಾಗೂ 728 ಮದ್ದುಗುಂಡುಗಳು ಸೇರಿದಂತೆ ಯುದ್ಧ ಸಾಮಗ್ರಿಗಳು ಪತ್ತೆಯಾಗಿವೆ.

ಮಣಿಪುರ ಪೊಲೀಸರು, ಸೇನೆ, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ಈ ಜಂಟಿ ಕಾರ್ಯಾಚರಣೆ ನಡೆಸಿದ್ದು, ಎಕೆ-47, ಎಂ-16, ಐಎನ್‌ಎಸ್‌ಎಎಸ್, ಎಸ್‌ಎಲ್‌ಆರ್, ಪಿಸ್ತೂಲ್, ಗಲಭೆ ವಿರೋಧಿ ಗನ್‌ಗಳು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿದೆ.

ಸ್ಫೋಟಕಗಳು, ಗ್ರೆನೇಡ್‌ಗಳು, ಮಾರ್ಟರ್ ಶೆಲ್, ಐಇಡಿಗಳು ಹಾಗೂ ಲಾಂಚರ್ ಸಾಧನಗಳೂ ಕೂಡ ಪತ್ತೆಯಾಗಿವೆ ಎಂದು ಮಣಿಪುರ ಐಜಿಪಿ ಕಬೀಬ್ ಕೆ. ತಿಳಿಸಿದ್ದು, ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಲು ಮತ್ತು ಅಕ್ರಮ ಶಸ್ತ್ರಾಸ್ತ್ರ ಜಾಲವನ್ನ ನಿರ್ಮೂಲನೆಗೊಳಿಸಲು ಮುಂದುವರೆದ ಈ ಕಾರ್ಯಾಚರಣೆ ಮಹತ್ವಪೂರ್ಣ ಯಶಸ್ಸು ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande