ಕೋಲಾರ, ೨೫ ಜುಲೈ(ಹಿ.ಸ) :
ಆ್ಯಂಕರ್ : ಇಂದಿನ ಟಿ.ವಿ.ಮಾಧ್ಯಮ, ಸಿಮಾ, ಮೊಬೈಲ್ ಮನರಂಜನೆಗಳ ನಡುವೆ ಗ್ರಾಮೀಣ ಸೊಗಡಿನ ನಾಟಕಗಳು ಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಕೋಲಾರ ಜಿಲ್ಲೆಯ ಗಡಿಭಾಗವಾದ ಬಂಗಾರಪೇಟೆ ತಾಲೂಕಿನ ಬ್ಯಾಡಬೆಲೆ ಎಂಬ ಕುಗ್ರಾಮದಲ್ಲಿ ಜಸಿದ ಕೆ.ಮುರಳಿ ಶ್ರೀ ವಿಜಯಕೃಷ್ಣ ಕಲಾ ಸಂಘವೊಂದನ್ನು ಹುಟ್ಟಹಾಕಿ ಸಂಘದ ಅಡಿಯಲ್ಲಿ ಖ್ಯಾತ ಚಲನಚಿತ್ರ ನಟನಟಿಯರೊಂದಿಗೆ ಹಾಗೂ ವೃತ್ತಿ ರಂಗಭೂಮಿ ಕಲಾವಿದರನ್ನೊಳಗೊಂಡ ಜಿಲ್ಲಾದ್ಯಂತ ಅನೇಕ ನಾಟಕ ಪ್ರದರ್ಶನಗಳನ್ನು ಡಿ ಜನಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ಬ್ಯಾಡಬೆಲೆ ಗ್ರಾಮದ ವಿಜಯಲಕ್ಷ್ಮಿ ಕೃಷ್ಣಮೂರ್ತಿ ದಂಪತಿಗಳ ಏಕೈಕ ಪುತ್ರ, ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ವಿದ್ಯಾರ್ಥಿ ದಿಸೆಯಿಂದಲೇ ಕಲಾವಿದನಾಗಿ ಬಂದ ಯುವ ತರುಣ ಬಿ.ಕಾಂ ಪದವೀಧರರಾಗಿದ್ದು, ಕೆಲವು ಧಾರವಾಹಿಗಳಲ್ಲಿ ನಟನಾಗಿ ಹಲವಾರು ಚಿತ್ರನಟಿಯರೊಂದಿಗೆ ನಟಿಸಿದ್ದಾರೆ.
ನಾಟಕಗಳು ನಮ್ಮ ಸಂಸ್ಕೃತಿಯ ಸಂಕೇತವಾಗಿವೆ. ಗ್ರಾಮೀಣ ಪ್ರದೇಶದಲ್ಲಿನ ಸೌಹಾರ್ದತೆ, ಸಾಮರಸ್ಯ ಕಾಪಾಡುವಲ್ಲಿ ಈ ನಾಟಕಗಳು ಹೆಚ್ಚು ಪರಿಣಾಮಕಾರಿಯಾಗಿದೆ.
ನಾಟಕ ಪ್ರದರ್ಶನಗಳು ಜಕ್ಕೂ ಸಮಾಜದ ಕನ್ನಡಿಯಿದ್ದಂತೆ. ಇಂದಿನ ಯುವ ಜನತೆ ನಾಟಕಗಳನ್ನು ವೀಕ್ಷಿಸಲು ಹಿಂದೇಟು ಹಾಕುತ್ತಿರುವುದರಿಂದ ಪಾತ್ರಕ್ಕೆ ಜೀವ ತುಂಬಿ ನೈಜವಾಗಿ ನಟಿಸುವ ವೃತ್ತಿರಂಗಭೂಮಿ ಕಲಾವಿದರ ಬದುಕು ಬಡವಾಗಿದೆ. ಕನ್ನಡ ನಾಡಿನಲ್ಲಿ ಕನ್ನಡತನವನ್ನು ಉಳಿಸಿ ಕಲೆಯನ್ನು ಪೋಷಣೆ ಮಾಡುತ್ತಿರುವ ಇವರಿಗೆ ೨೦೧೫ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಈಗ ೨೦೨೫ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಬ್ಯಾಡಬೆಲೆ ಕೆ. ಮುರಳಿ ಆಯ್ಕೆಯಾಗಿರುವುದು ಜಿಲ್ಲೆಯ ಕಲಾ ಪ್ರೇಮಿಗಳಿಗೆ ಜಕ್ಕೂ ಸಂತಸದ ವಿಷಯ ಎಂದರೆ ತಪ್ಪಾಗಲಾರದು.
ಇನ್ನು ಹೆಚ್ಚೆಚ್ಚು ಕೀರ್ತಿ ಪ್ರತಿಷ್ಟೆಗಳಿಗೆ ಬ್ಯಾಡಬೆಲೆ ಕೆ.ಮುರಳಿ ಅವರು ಭಾಜನರಾಗಿ ಜಿಲ್ಲೆಯ ಸೊಗಡನ್ನು ರಾಜ್ಯದೆಲ್ಲೆಡೆ ಪಸರಿಸಲಿ ಎಂಬುದು ಸಾರ್ವಜಕರ ಆಶಯವಾಗಿದೆ.
ಚಿತ್ರ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಮುರಳಿ ನಾಟಕದ ಅಭಿನಯದ ದೃಶ್ಯ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್