ಹೊಸಪೇಟೆ, 26 ಜುಲೈ (ಹಿ.ಸ.) :
ಆ್ಯಂಕರ್ : ಸಂಜೀವಿನಿ ಎನ್‍ಆರ್‍ಎಲ್‍ಎಂ ಯೋಜನೆಯಡಿ ಜಿಲ್ಲಾ ಪಂಚಾಯತ್‍ನಲ್ಲಿ ಸ್ಥಾಪಿಸುವ ಅಕ್ಕ ಕೆಫೆ ಕ್ಯಾಂಟಿನ್‍ನಲ್ಲಿ ಕನಿಷ್ಠ 10 ವರ್ಷ ಕ್ಯಾಂಟೀನ್ ವಿಭಾಗದಲ್ಲಿ ಅನುಭವವಿರುವ ಶುಚಿರುಚಿಯಾದ ಆಹಾರ ತಯಾರಿಸಲು ಆಸಕ್ತಿ ಇರುವ ಅರ್ಹ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಕ್ರಮ್ ಅಲಿ ತಿಳಿಸಿದ್ದಾರೆ.
ಆಸಕ್ತಿ ಇರುವ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸ್ವ-ಸಹಾಯ ಗುಂಪುಗಳು ಅರ್ಜಿ ಸಲ್ಲಿಸಬಹುದು. ಜು.22 ರಿಂದ ಜು.28 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕರ ವಿಭಾಗ ಕಲಾವತಿ ಜಿಲ್ಲಾ ವ್ಯವಸ್ಥಾಪಕರು (ಕೌಶಲ್ಯ) ಮೊ.9538740865 ಇವರನ್ನು ಸಂಪರ್ಕಿಸಬಹುದು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್