ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೋಮ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿಗೆ ಅರ್ಜಿ ಆಹ್ವಾನ
ಹೊಸಪೇಟೆ, 26 ಜುಲೈ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಎಸ್‌ಎಸ್‌ಎಲ್‌ಸಿ, ಐಟಿಐ ಮತ್ತು ಡಿಪ್ಲೋಮ ಪಾಸ್ ಅಥವಾ ಪೇಲ್‌ದ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮರಿಯಮ್ಮನಹಳ್ಳಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ. ಹೊಸಪ
ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೋಮ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿಗೆ ಅರ್ಜಿ ಆಹ್ವಾನ


ಹೊಸಪೇಟೆ, 26 ಜುಲೈ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಎಸ್‌ಎಸ್‌ಎಲ್‌ಸಿ, ಐಟಿಐ ಮತ್ತು ಡಿಪ್ಲೋಮ ಪಾಸ್ ಅಥವಾ ಪೇಲ್‌ದ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮರಿಯಮ್ಮನಹಳ್ಳಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.

ಹೊಸಪೇಟೆಯ ಹರಿಹರ ರಸ್ತೆ ಮರಿಯಮ್ಮನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿ.ಟಿ.ಮತ್ತು ಟಿ.ಸಿ.) 2025-26ನೇ ಸಾಲಿನ ಅಲ್ಪಾವಧಿ ತರಬೇತಿಗಳಾದ ಟೂಲ್ ರೂಂ ಮಷಿನಿಸ್ಟ್, ಸಿಎನ್‌ಸಿ ಟೆಕ್ನಾಲಜಿಸ್ಟ್, ಟರ್ನರ್, ಮಿಲ್ಲರ್, ಗ್ರಿಂಡರ್, ಫಿಟ್ಟರ್, ಕ್ಯಾಡ್, ಕ್ಯಾಮ್ ಕೋರ್ಸ್ಗಳಿಗೆ, ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೋಮ ಪಾಸ್/ಫೇಲ್ ಮತ್ತು ಬಿ.ಇ. ಓದುತ್ತಿರುವ ಪಾಸಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, (ಜಿ.ಟಿ.ಮತ್ತು ಟಿ.ಸಿ.) ಹೊಸಪೇಟೆ ಇವರನ್ನು ಖುದ್ದಾಗಿ ಅಥವಾ ಮೊ. 8722999929, 7795969915, 9845416198ಗೆ ಸಂಪರ್ಕಿಸಬಹುದಾಗಿದೆ. ಜುಲೈ. 31ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande