ಜೆಸ್ಕಾಂ ಆನ್‍ಲೈನ್, ಆಪ್‍ಲೈನ್‍ಗಳ ಸೇವೆಗಳು ಸ್ಥಗಿತ
ಹೊಸಪೇಟೆ, 26 ಜುಲೈ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಡೇಟಾ ಸೆಂಟರ್‍ನಲ್ಲಿ ಜು.27 ಬೆ.10 ಗಂಟೆಯವರೆಗೆ ನಿರ್ವಹಣಾ ಚಟುವಟಿಕೆಯನ್ನು ನಿಗದಿಪಡಿಸಲಾಗಿದೆ. ಅಸ್ತಿತ್ವದಲ್ಲಿರುವ ಸಂಗ್ರಹಣೆಯನ್ನು ಸಾಮಥ್ರ್ಯದ ಹೊಸ ಸಂಗ್ರಹಣೆಯೊಂದಿಗೆ ಬದಲಾಯಿಸಲು ಇದನ್ನು ಕೈಗೊಳ್ಳಲಾಗುತ್ತದೆ. ಈ ನಿರ್ವಹಣಾ ಚಟುವಟಿಕೆಯ ಸ
ಜೆಸ್ಕಾಂ ಆನ್‍ಲೈನ್, ಆಪ್‍ಲೈನ್‍ಗಳ ಸೇವೆಗಳು ಸ್ಥಗಿತ


ಹೊಸಪೇಟೆ, 26 ಜುಲೈ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಡೇಟಾ ಸೆಂಟರ್‍ನಲ್ಲಿ ಜು.27 ಬೆ.10 ಗಂಟೆಯವರೆಗೆ ನಿರ್ವಹಣಾ ಚಟುವಟಿಕೆಯನ್ನು ನಿಗದಿಪಡಿಸಲಾಗಿದೆ. ಅಸ್ತಿತ್ವದಲ್ಲಿರುವ ಸಂಗ್ರಹಣೆಯನ್ನು ಸಾಮಥ್ರ್ಯದ ಹೊಸ ಸಂಗ್ರಹಣೆಯೊಂದಿಗೆ ಬದಲಾಯಿಸಲು ಇದನ್ನು ಕೈಗೊಳ್ಳಲಾಗುತ್ತದೆ.

ಈ ನಿರ್ವಹಣಾ ಚಟುವಟಿಕೆಯ ಸಮಯದಲ್ಲಿ, ಕಾರ್ಯ ಮತ್ತು ಪಾಲನ ನಗರ ಉಪ-ವಿಭಾಗ 1 ಮತ್ತು 2 ಜೆಸ್ಕಾಂ ಹೊಸಪೇಟೆ ನಗರ ಪ್ರದೇಶಗಳಲ್ಲಿ ಹೊಸ ಆರ್‍ಎಪಿಡಿಆರ್‍ಪಿ ತಂತ್ರಾಶದ ಮೂಲಕ ಎಲ್ಲಾ ಆನ್‍ಲೈನ್, ಆಪ್‍ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಮತ್ತು ನಗದು ಕೌಂಟರ್‍ಗಳು, ಬಿಲ್ ಪಾವತಿ, ಹೊಸ ಸಂಪರ್ಕ, ನೋಂದಣಿ ಮುಂತಾದ ಆನ್‍ಲೈನ್ ಸೇವೆಗಳು ಗ್ರಾಹಕರಿಗೆ ಕಾರ್ಯನಿರ್ವಹಿಸುವುದಿಲ್ಲ. ಸಾರ್ವಜನಿಕರು, ಜೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಕಾರ್ಯ ಮತ್ತು ಪಾಲನಾ ನಗರ ವಿಭಾಗ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande