ಕೋಲಾರ, 25 ಜುಲೈ (ಹಿ.ಸ) :
ಆ್ಯಂಕರ್ : ರಾಜ್ಯದಲ್ಲಿ ವಿದ್ಯುತ್ ಬಳಕೆದಾರರನ್ನು ಸುಲಿಗೆ ಮಾಡಲು ಸರ್ಕಾರ ಹೊರಟಿರುತ್ತದೆ. ರಾಜ್ಯ ಸರ್ಕಾರ ಜಾರಿ ಮಾಡಿರುವ ೨೦೦ ಯೂನಿಟ್ ವಿದ್ಯುತ್ ಉಚಿತ ಯೋಜನೆಯಲ್ಲಿ ಮೈಮರೆತಿರುವ ಜನರನ್ನು ಯಾರಿಗೂ ತಿಳಿಯದೆ ಮೋಸ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆ ಜಾರಿಗೆ ಮೊದಲು ವಿದ್ಯುತ್ ಪ್ರಾರಂಭಿಕ ಶುಲ್ಕ ೩ ರೂಪಾಯಿ ೮೦ ಪೈಸೆ ಇದ್ದದು, ೫ ರೂಪಾಯಿ ೮೦ ಪೈಸೆ ನಿಗದಿ ಪಡಿಸಲಾಗಿದೆ. ಒಂದು ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕ ಪಡಿದರೆ ೪೦ ರೂಪಾಯಿ ಮಿನಿಮಮ್ ಚಾರ್ಜ್ ಇದ್ದದು ೧೪೫ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಆರೋಪಿಸಿದ್ದಾರೆ.
ಗ್ಯಾರಂಟಿಗಳ ಗುಂಗಿನಲ್ಲಿ ಇರುವ ಜನರ ಗಮನಕ್ಕೆ ಬರದಂತೆ ಮಿನಿಮಮ್ ಚಾರ್ಜ್ ಮತ್ತು ಯೂನಿಟ್ ದರಗಳನ್ನು ಹೆಚ್ಚಿಸಿರುವುದು ಕೆಇಆರ್ಸಿ ಮತ್ತು ಬೆಸ್ಕಾಂ ಇಲಾಖೆಗಳ ಆಘಾತಕಾರಿ ನಡೆಯಾಗಿದೆ. ಈ ರೀತಿ ವಿದ್ಯುತ್ ಬಳಕೆದಾರರ ಗಮನಕ್ಕೆ ತರದೆ ಏಕಮುಖವಾಗಿ ತೀರ್ಮಾನ ಮಾಡುತ್ತಿರುವುದು ಸಾರ್ವಜನಿಕರ ಶೋಷಣೆಯ ಕ್ರಮವಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಆರೋಪಿಸಿದ್ದಾರೆ.
ಮುಳಬಾಗಿಲು ತಾಲೂಕಿನ ವಡ್ಡಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಳೆಯ ವಿದ್ಯುತ್ ಮೀಟರ್ಗಳನ್ನು ಹಂತ ಹಂತವಾಗಿ ಬದಲಾಯಿಸಿ ಡಿಜಿಟಲ್ ಕೆಇಆರ್ಸಿ ಮತ್ತು ಬೆಸ್ಕಾಂ ಇಲಾಖೆಗಳು ಹೇಳುತ್ತಿರುವುದು ಸಾರ್ವಜನಿಕರಿಗೆ ಉಂಡೆ ನಾಮ ಹಾಕುವ ಕ್ರಮವಾಗಿರುತ್ತದೆ. ಸರಿಯಾಗಿ ಇರುವ ವಿದ್ಯುತ್ ಮೀಟರುಗಳನ್ನು ಬದಲಿಸಿ ಡಿಜಿಟಲ್ ಮೀಟರ್ ಅಳವಡಿಸುತ್ತೇವೆ ಎನ್ನುವುದೇ ಒಂದು ದೊಡ್ಡ ಭ್ರಷ್ಟಾಚಾರವಾಗಿದೆ. ೯೦೦ ರೂಪಾಯಿಗಳ ಮೀಟರನ್ನು ೧೦೦೦೦ ರೂಪಾಯಿಗಳಿಗೆ ಅಳವಡಿಸುತ್ತಿರುವುದೇ ಮೋಸ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿರುತ್ತದೆ. ಈ ಹಿಂದೆ ಹಣ ಕಟ್ಟಿದರು ಮೀಟರ್ ಹಾಕದ ಬೆಸ್ಕಾಂ ಇಲಾಖೆ ಈಗ ಉಚಿತವಾಗಿ ಮೀಟರ್ ಹಾಕುತ್ತೇವೆ ಎಂದು ಮನೆ ಮನೆಗೆ ಬರಲು ಕಾರಣವೇನು? ಮೀಟರ್ ಉತ್ಪಾದನೆ ಮಾಡುವ ಕಂಪೆನಿಗೆ ಲಾಭ ಮಾಡಿಕೊಡಲು ಸರ್ಕಾರ ಮತ್ತು ಬೆಸ್ಕಾಂ ಇಲಾಖೆ ಸೇರಿ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂದು ದೂರಿದರು.
ಬೆಸ್ಕಾಂ ವಿದ್ಯುತ್ ಮೀಟರ್ ಅಳವಡಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಾರ್ವಜನಿಕರು ಸಹ ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಸುವುದನ್ನು ತಡೆಯಬೇಕು. ಬೆಸ್ಕಾಂ ಇಲಾಖೆಯು ಮೀಟರ್ ಅಳವಡಿಸುವುದನ್ನು ಮುಂದುವರಿಸಿದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸಾರ್ವಜನಿಕರು ಒಡಗೂಡು ಇಲಾಖೆಯ ವಿರುದ್ಧ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ರಾಜ್ಯ ಉಪಾಧ್ಯಕ್ಷ ಬೈಚೇಗೌಡ, ಬಯಲು ಸೀಮೆ ಕಾರ್ಯದರ್ಶಿ ಪ್ರಭಾಕರ ಗೌಡ, ರಾಜ್ಯ ರಾಜ್ಯ ಹಸಿರು ಸೇನೆ ಸಂಚಾಲಕ ಕೆ. ಆನಂದ ಕುಮಾರ್, ಜಿಲ್ಲಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೇಹೊಸಹಳ್ಳಿ ರಮೇಶ್, ಪಡವನಹಳ್ಳಿ ನರಸಿಂಹಯ್ಯ ತಿಪ್ಪಸಂದ್ರ ಹರೀಶ್, ಅಬ್ಬಣಿ ಶ್ರೀನಿವಾಸ, ಕೋಲಾರ ತಾಲ್ಲೂಕು ಅಧ್ಯಕ್ಷ ಚಿನ್ನಾಪುರ ಮಂಜುನಾಥ, ಕೆ.ಜಿ.ಎಪ್ ತಾಲ್ಲೂಕು ಅಧ್ಯಕ್ಷ ಸಿ. ಎಂ. ಕೃಷ್ಣಮೂರ್ತಿ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ರಾತೇನಹಳ್ಳಿ ತಿಮ್ಮಾರೆಡ್ಡಿ, ಗುರಪ್ಪ, ಬೇವಹಳ್ಳಿ ಮಂಜುನಾಥ, ಮಹಿಳಾ ಸಂಚಾಲಕರಾದ ರಾಧಮ್ಮ, ಭಾರತಮ್ಮ, ಸರಸ್ವತಮ್ಮ, ಉಮಾದೇವಿ, ನಾಗರಾಜ, ರಾಜಣ್ಣ, ನಾರಾಯಣಸ್ವಾಮಿ, ಸುಬ್ರಮಣಿ, ಸತೀಶ್, ಕೃಷ್ಣಪ್ಪ, ಶ್ರೀನಿವಾಸ, ಕೆಂಪೇಗೌಡ ಇನ್ನು ಇತರರು ಭಾಗವಹಿಸಿದ್ದರು.
ಚಿತ್ರ : ಮುಳಬಾಗಿಲು ತಾಲೂಕಿನ ವಡ್ಡಹಳ್ಳಿಯಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಬೆಸ್ಕಾಂ ವಿದ್ಯುತ್ ಮೀಟರ್ ಅಳವಡಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್