ಜೈಪುರ, 17 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕರಿಗೆ ಪದೇಪದೇ ಕಠಿಣ ಪಾಠ ಕಲಿಸಿದ್ದಾರೆ,” ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ರಾಜಸ್ಥಾನದ ಜೈಪುರದ ದದಿಯಾ ಗ್ರಾಮದಲ್ಲಿ ನಡೆದ ‘ಅಂತರರಾಷ್ಟ್ರೀಯ ಸಹಕಾರಿ ವರ್ಷ 2025’ರ ‘ಸಹಕಾರ ಮತ್ತು ಉದ್ಯೋಗ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಶಾ ಅವರು 8,000 ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿ, ಪಾಕಿಸ್ತಾನದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ್, ಉರಿ ಹಾಗೂ ಪುಲ್ವಾಮಾ ದಾಳಿಗಳಿಗೆ ನೀಡಲಾದ ಪ್ರತ್ಯುತ್ತರದ ಕುರಿತು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಯೋಜನೆಯಡಿ 24 ಗೋದಾಮುಗಳು, 64 ರಾಗಿ ಮಳಿಗೆಗಳು, 1,400 ಫಲಾನುಭವಿಗಳಿಗೆ ₹12 ಕೋಟಿ ಗೋಪಾಲ್ ಕ್ರೆಡಿಟ್ ಕಾರ್ಡ್ ಸಾಲ, 2,346 ಮೈಕ್ರೋ ಎಟಿಎಂ, 100 ಹೊಸ ಪೊಲೀಸ್ ವಾಹನಗಳಿಗೆ ಚಾಲನೆ, ಮತ್ತು ಪಿಡಿಸಿಎಸ್ ಆನ್‌ಲೈನ್ ನೋಂದಣಿ ವೇದಿಕೆಯ ಆರಂಭ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa