ಪಾಕಿಸ್ತಾನ ಡ್ರೋನ್ ಮೂಲಕ ಸಾಗಿಸುತ್ತಿದ್ದ ಹೆರಾಯಿನ್ ವಶ
ಚಂಡೀಗಡ, 17 ಜುಲೈ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತ ಗಡಿಗೆ ಕಳಿಸಲಾಗಿದ್ದ 15 ಪ್ಯಾಕೆಟ್ ಹೆರಾಯಿನ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಪಂಜಾಬಿನ ಫಿರೋಜ್‌ಪುರ ಜಿಲ್ಲೆಯ ಹುಸೇನಿ ವಾಲಾ ಗಡಿಯ ಬಳಿಯ ಟೆಂಡಿ ವಾಲಾ ಹಾಗೂ ಜಲ್ಲೋಕ್ ಗ್ರಾಮಗಳ ಸಮೀಪದ ಹೊಲದಲ್ಲಿ ಈ ನಿಷೇಧಿತ ಮಾದಕ
Heroin


ಚಂಡೀಗಡ, 17 ಜುಲೈ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತ ಗಡಿಗೆ ಕಳಿಸಲಾಗಿದ್ದ 15 ಪ್ಯಾಕೆಟ್ ಹೆರಾಯಿನ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಪಂಜಾಬಿನ ಫಿರೋಜ್‌ಪುರ ಜಿಲ್ಲೆಯ ಹುಸೇನಿ ವಾಲಾ ಗಡಿಯ ಬಳಿಯ ಟೆಂಡಿ ವಾಲಾ ಹಾಗೂ ಜಲ್ಲೋಕ್ ಗ್ರಾಮಗಳ ಸಮೀಪದ ಹೊಲದಲ್ಲಿ ಈ ನಿಷೇಧಿತ ಮಾದಕ ವಸ್ತು ಪತ್ತೆಯಾಗಿದೆ.

ಬಿಎಸ್‌ಎಫ್ ಮೂಲಗಳ ಮಾಹಿತಿ ಪ್ರಕಾರ, ಪ್ಯಾಕೆಟ್‌ಗಳು ಹಳದಿ ಟೇಪ್‌ನಲ್ಲಿ ಸುತ್ತಿರಿಸಲಾಗಿದ್ದು, ಪ್ರತಿಯೊಂದು ಪ್ಯಾಕೆಟ್ ಸುಮಾರು ಅರ್ಧ ಕಿಲೋಗ್ರಾಂ ತೂಕವಿದೆ. ಒಟ್ಟು 7.5 ಕೆಜಿ ಹೆರಾಯಿನ್ ಪತ್ತೆಯಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಣೆ ತಪ್ಪಿಸಲಾಗಿದೆ.

ಬಿಎಸ್‌ಎಫ್‌ಗೆ ಡ್ರೋನ್ ಚಲನವಲನದ ಬಗ್ಗೆ ಮುಂಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಪೊಲೀಸರು ಮತ್ತು ಬಿಎಸ್‌ಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಇನ್ನೂ ಹೆಚ್ಚಿನ ಹೆರಾಯಿನ್ ಪ್ಯಾಕೆಟ್‌ಗಳ ಪತ್ತೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande