ಕೋಲಾರ ತಾಲ್ಲೂಕು ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಚುನಾವಣೆ ಪೂರ್ವಭಾವಿ ಸಭೆ
ಕೋಲಾರ ತಾಲ್ಲೂಕು ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಚುನಾವಣೆ ಪೂರ್ವಭಾವಿ ಸಭೆ
ಚಿತ್ರ : ಕೋಲಾರ ತಾಲ್ಲೂಕು ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು


ಕೋಲಾರ, ೧೫ ಜುಲೈ (ಹಿ ಸ) :

ಆ್ಯಂಕರ್ : ವಿಶ್ವಾಸದಿಂದ ಚುನಾವಣಾ ಕೆಲಸ ಮಾಡಿ ನಿಮ್ಮ ಜೊತೆಗೆ ನಾವು ಇದ್ದೇವೆ ಪಟ್ಟಣ ಪಂಚಾಯತಿಯ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೈ ಹಿಡಿಯುವಂತೆ ಮಾಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ವೇಮಗಲ್ ಮತ್ತು ಕುರಗಲ್ ಪಟ್ಟಣ ಪಂಚಾಯತಿಯ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲರ ವಿಶ್ವಾಸವನ್ನು ಪಡೆದು ೧೭ ಸ್ಥಾನಗಳನ್ನು ಗೆಲ್ಲಬೇಕು ಯಾವುದೇ ಸಮಸ್ಯೆಗಳು ಇದ್ದರು ನಮ್ಮ ಗಮನಕ್ಕೆ ತನ್ನಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಐದು ವರ್ಷದಿಂದ ಚುನಾವಣೆ ಇರಲಿಲ್ಲ ತಡವಾದ ಮೇಲೆ ಚುನಾವಣೆ ಘೋಷಣೆ ಮಾಡಿದ್ದಾರೆ ಮೈತ್ರಿ ಪಕ್ಷಗಳು ನಮ್ಮ ಎದುರಾಳಿಗಳಾಗಿದ್ದಾರೆ ಮೊದಲ ಬಾರಿಗೆ ಚುನಾವಣೆ ಬಂದಿದೆ ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದೆ ಐದು ಗ್ಯಾರಂಟಿ ಯೋಜನೆಗಳು ಸಹ ಜಾರಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲತ್ತದೆ ಹಿಂದೆ ವೇಮಗಲ್ ವಿಧಾನ ಸಭಾ ಕ್ಷೇತ್ರವು ಜಾರಿಯಲ್ಲಿ ಇತ್ತು ಈಗ ಪಟ್ಟಣ ಪಂಚಾಯತಿ ಮಾಡಿದ್ದಾರೆ ಇದು ಕೂಡ ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗಿದೆ ಪ್ರತಿಷ್ಠೆಯಾಗಿ ಎಲ್ಲರ ಮಾರ್ಗದರ್ಶನದಲ್ಲಿ ಚುನಾವಣೆ ಮಾಡೋಣ ಎಂದರು.

ಮೊದಲನೇ ಬಾರಿಗೆ ಈ ಭಾಗದಲ್ಲಿ ಯೋಜನಾ ಪ್ರಾಧಿಕಾರ ಜಾರಿ ಮಾಡಲಾಯಿತು ಭವಿಷ್ಯದಲ್ಲಿ ತಾಲೂಕು ಕೇಂದ್ರವು ಮಾಡಲಾಗುತ್ತದೆ ಕ್ಯಾಲನೂರು ಹೋಬಳಿ ಮಾಡಲಾಗುತ್ತದೆ ಮತ್ತಷ್ಟು ಅಭಿವೃದ್ಧಿಗೆ ಮೊದಲ ಬಾರಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲಬೇಕು ೧೭ ಸ್ಥಾನಕ್ಕೆ ಅಷ್ಟೇ ಅವಕಾಶವಿದೆ ಉಳಿದವರಿಗೆ ಅವಕಾಶ ವಂಚಿತರಿಗೆ ನಾಮನಿರ್ದೇಶನ ಮಾಡಲಾಗುತ್ತದೆ ಜುಲೈ೧೯ ರಿಂದ ಮೂರು ದಿನಗಳ ವಾರ್ಡ್ ವಾರು ಸಭೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಅಲ್ಲಿಯೇ ಅವಕಾಶಗಳನ್ನು ಕೇಳಬಹುದು ಎಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ ವೇಮಗಲ್ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವು ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಪಟ್ಟಣ ಪಂಚಾಯತಿ ಪ್ರಾರಂಭಿಕ ಹಂತವಾಗಿದೆ ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಬೇಕು ಬೆಂಗಳೂರಿಗೆ ಹತ್ತಿರದಲ್ಲಿ ಇದೆ ಕೆಲವು ಅಪಪ್ರಚಾರವು ಮಾಡತ್ತಾರೆ ಅವರಿಗೆ ಪಕ್ಷದ ಸಾಧನೆಗಳನ್ನು ಧೈರ್ಯದಿಂದ ಹೇಳಿ ಗೆದ್ದು ಬರಬೇಕು ಸಮಾಜಿಕ ನ್ಯಾಯದ ಪ್ರಕಾರ ಆಯ್ಕೆ ಮಾಡಲಾಗುತ್ತದೆ ಮನೆ ಮನೆಗೆ ಹೋಗಿ ಜನರ ವಿಶ್ವಾಸ ಗಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ವೈ ಶಿವಕುಮಾರ್, ತಾಲೂಕು ಅಧ್ಯಕ್ಷ ಮುನಿಯಪ್ಪ, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಸಿಎಂಎಂ ಮಂಜುನಾಥ್, ಜಂಬಾಪುರ ವೆಂಕಟರಾಮ್ ಮಣಿಘಟ್ಟ ಸೊಣ್ಣೇಗೌಡ, ಯುವ ಕಾಂಗ್ರೆಸ್ ಬರ್ಕತ್, ಮುಂತಾದವರು ಇದ್ದರು.

ಚಿತ್ರ : ಕೋಲಾರ ತಾಲ್ಲೂಕು ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande