ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ
ಪಾಟ್ನಾ, 12 ಜುಲೈ (ಹಿ.ಸ.) : ಆ್ಯಂಕರ್ : ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಜುಲೈ 20ರೊಳಗೆ ಬಾಂಬ್ ಇಟ್ಟು ಕೊಲ್ಲುವುದಾಗಿ ಇನ್‌ಸ್ಟಾಗ್ರಾಂ ಖಾತೆ ಮೂಲಕ ಬೆದರಿಕೆ ಹಾಕಲಾಗಿದ್ದು. ಈ ಕುರಿತು ಪಾಟ್ನಾದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಕ
Theret


ಪಾಟ್ನಾ, 12 ಜುಲೈ (ಹಿ.ಸ.) :

ಆ್ಯಂಕರ್ : ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಜುಲೈ 20ರೊಳಗೆ ಬಾಂಬ್ ಇಟ್ಟು ಕೊಲ್ಲುವುದಾಗಿ ಇನ್‌ಸ್ಟಾಗ್ರಾಂ ಖಾತೆ ಮೂಲಕ ಬೆದರಿಕೆ ಹಾಕಲಾಗಿದ್ದು. ಈ ಕುರಿತು ಪಾಟ್ನಾದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಷದ ಮುಖ್ಯ ವಕ್ತಾರ ರಾಜೇಶ್ ಭಟ್ ಅವರ ಪ್ರಕಾರ, ಯೂಟ್ಯೂಬರ್ ದಕ್ಷಪ್ರಿಯ ಅವರ ಇನ್‌ಸ್ಟಾಗ್ರಾಂ ಖಾತೆಯ ಕಾಮೆಂಟ್ ವಿಭಾಗದಲ್ಲಿ “ಟೈಗರ್ ಮೆರಾಜ್” ಎಂಬ ಖಾತೆ ಈ ಬೆದರಿಕೆಯನ್ನು ಹಾಕಿದ್ದು, ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಚಿರಾಗ್ ಪಾಸ್ವಾನ್ ಅವರ ಸೋದರ ಮಾವ ಮತ್ತು ಸಂಸದ ಅರುಣ್ ಭಾರ್ತಿ ಈ ಬೆದರಿಕೆಗೆ ಆರ್‌ಜೆಡಿ ಪಕ್ಷದವರು ಹೊಣೆಗಾರರು ಎಂದು ಆರೋಪಿದ್ದು, ಆರ್‌ಜೆಡಿ ಬಿಹಾರದಲ್ಲಿ ಮತ್ತೆ 'ಜಂಗಲ್ ರಾಜ್ 2.0' ತರಲು ಯತ್ನಿಸುತ್ತಿದೆ ಎಂದಿದ್ದಾರೆ.

ಚಿರಾಗ್‌ ಪಾಸ್ವಾನ್‌ರ ಭದ್ರತೆಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದು ಮತ್ತು ಗುಂಡು ನಿರೋಧಕ ವಾಹನ ಒದಗಿಸಬೇಕೆಂದು ಸಂಸದ ಭಾರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande