ಶ್ರೀನಗರ, 12 ಜುಲೈ (ಹಿ.ಸ.) :
ಆ್ಯಂಕರ್ : ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾರ್ಯನಿರ್ವಹಿಸುತ್ತಿದ್ದ ಮೂವರು ಭಯೋತ್ಪಾದಕರಿಗೆ ಸೇರಿದ ₹3.2 ಕೋಟಿ ಮೌಲ್ಯದ 9 ಕನಾಲ್ ಹಾಗೂ 1.5 ಮಾರ್ಲಾ ಭೂಮಿಯನ್ನು ಗಂಡರ್‌ಬಾಲ್ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ಖೀರ್ ಭವಾನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಯುಎಪಿಎ ಕಾಯ್ದೆಯ ಸೆಕ್ಷನ್ 13 ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ.
ವಶಪಡಿಸಕೊಳ್ಳಲಾದ ಆಸ್ತಿ ಫಾರೂಕ್ ಅಹ್ಮದ್ ರಾಥರ್, ನೂರ್ ಮೊಹಮ್ಮದ್ ಪ್ಯಾರಿ ಮತ್ತು ಮೊಹಮ್ಮದ್ ಮಕ್ಬೂಲ್ ಸೋಫಿಗೆ ಸೇರಿದಾಗಿದ್ದು, ಗಡಿಯಾಚೆಯಿಂದ ಉಗ್ರ ಚಟುವಟಿಕೆಗಳಿಗೆ ಸಹಕಾರ ನೀಡಿರುವವರ ವಿರುದ್ಧದ ಕ್ರಮವಿದು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa