ನವದೆಹಲಿ, 12 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಇದು ದೇಶದಾದ್ಯಂತ 47 ಸ್ಥಳಗಳಲ್ಲಿ ನಡೆದ 16ನೇ ಉದ್ಯೋಗ ಮೇಳದ ಭಾಗವಾಗಿ ಜರುಗಿತು.
ಈ ಸಂದರ್ಭ ಮಾತನಾಡಿದ ಪ್ರಧಾನಿ, ಈ ಉದ್ಯೋಗ ಮೇಳಗಳ ಮೂಲಕ ಲಕ್ಷಾಂತರ ಯುವಕರು ಶಾಶ್ವತ ಸರ್ಕಾರಿ ಉದ್ಯೋಗ ಗಳಿಸಿದ್ದಾರೆ. ದೇಶದ ನಿರ್ಮಾಣದಲ್ಲಿ ಅವರು ಮಹತ್ತರ ಪಾತ್ರವಹಿಸುತ್ತಿದ್ದಾರೆ, ಎಂದು ಹೇಳಿದರು.
ಇತ್ತೀಚೆಗೆ ಐದು ದೇಶಗಳಿಗೆ ನೀಡಿದ ಭೇಟಿಗಳ ಪ್ರಸ್ತಾಪ ಮಾಡಿದ ಅವರು, ಅಲ್ಲಿನ ಒಪ್ಪಂದಗಳು ಭಾರತೀಯ ಯುವಕರಿಗೆ ನಿಶ್ಚಿತವಾಗಿ ಪ್ರಯೋಜನಕಾರಿಯಾಗಲಿವೆ, ಎಂದರು.
ಭಾರತವು ವಿಶ್ವದಾದ್ಯಂತ ಎರಡು ಅಪರಿಮಿತ ಶಕ್ತಿಗಳನ್ನು ಹೊಂದಿದೆ — ಯುವಜನಸಂಖ್ಯೆ ಮತ್ತು ಪ್ರಜಾಪ್ರಭುತ್ವ. ನವೋದ್ಯಮ, ನಾವೀನ್ಯತೆ ಹಾಗೂ ಸಂಶೋಧನೆಗಳಿಗೆ ದೇಶದಲ್ಲಿ ವಾತಾವರಣ ರೂಪುಗೊಂಡಿದೆ. ಇದರಿಂದ ಯುವಕರ ಸಾಮರ್ಥ್ಯ ಹೆಚ್ಚುತ್ತಿದೆ, ಎಂದು ಹೇಳಿದರು.
ಖಾಸಗಿ ವಲಯದಲ್ಲಿಯೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ. ಇತ್ತೀಚೆಗೆ ಉದ್ಯೋಗ ಪ್ರೋತ್ಸಾಹಕ ಯೋಜನೆಗೂ ಅನುಮೋದನೆ ನೀಡಲಾಗಿದೆ. ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa