ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸುವಲ್ಲಿ ವಿಳಂಬ ಬೇಡ
ಗದಗ, 12 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ ಬಿ ಅಸೂಟಿ ಇವರ ಉಪಸ್ಥಿತಿಯಲ್ಲಿ ಗುರುವಾರ ರೋಣ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ಹಿರೇಹಾಳ ಗ್ರಾಮದ ಪಂಚಾಯತಿ ಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರೋಣ ತಾಲೂಕ ಗ್ಯಾರ
ಪೋಟೋ


ಗದಗ, 12 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ ಬಿ ಅಸೂಟಿ ಇವರ ಉಪಸ್ಥಿತಿಯಲ್ಲಿ ಗುರುವಾರ ರೋಣ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ಹಿರೇಹಾಳ ಗ್ರಾಮದ ಪಂಚಾಯತಿ ಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ರೋಣ ತಾಲೂಕ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸಂಗನಗೌಡ (ಮಿಥುನ್) ಜಿ ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಜಿಲ್ಲಾ‌ ಅಧ್ಯಕ್ಷ ಬಿ ಬಿ ಅಸೂಟಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಜಿ.ಎಸ್‌.ಟಿ. ಹಾಗೂ ಮನೆ ಯಜಮಾನಿ ನಿಧನ ಹೊಂದಿದವರ ಹೆಸರನ್ನು ಬದಲಾವಣೆ ಮಾಡಿ. ಬೇರೆಯವರಿಗೆ ನೊಂದಣಿ ಮಾಡಿಸಬೇಕು ಯಾವ ಬಡ ಕುಟುಂಬವು ಈ ಯೋಜನೆಯಿಂದ ದೂರ ಉಳಿಯಬಾರದು ಪ್ರತಿಮನೆ ಅಂಗನವಾಡಿ ಕಾರ್ಯಕರ್ತರಿಂದ ಸರ್ವೆ ಮಾಡಿಸುವುದು ಕಡ್ಡಾಯ ಅನೇಕ ಸಮಸ್ಯೆಗಳು ಸುದೀರ್ಘ ಚರ್ಚೆ ನಡೆದು ಮುಂದಿನ ದಿನದಲ್ಲಿ ಪ್ರತಿಶತ ನೂರರಷ್ಟು ಗುರಿ ಸಾಧಿಸ ಬೇಕು ಎಂದರು.

ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಅಕ್ಕಿ ಜೋಳ ಸರಿಯಾದ ಸಮಯಕ್ಕೆ ಎಲ್ಲಾ ಕುಟುಂಬಕ್ಕೆ ವಿತರಣೆ ಮಾಡಬೇಕು ಕಾಳ ಸಂತೆಯಲ್ಲಿ ಮಾರಾಟವಾಗದನ್ನ ತಡೆಯಬೇಕು ಎಂದರು.

ಗೃಹ ಜ್ಯೋತಿ ಎಲ್ಲಾ ಕುಟುಂಬಕ್ಕೂ ಈ ಯೋಜನೆ ತಲುಪಿಸಲು ಅಧಿಕಾರಿಗಳು ಮನೆ ಮನೆಗೆ ಹೋಗಿ ನೊಂದಣಿ ಮಾಡಿಸಲು ಶ್ರಮವಹಿಸಬೇಕು ಎಂದು ಹೇಳಿದರು.

ಯುವ ನಿಧಿ ಯೋಜನೆ ಸಮರ್ಪಕವಾಗಿ ಪದವಿಗಳನ್ನು ಪಡೆದ ಎಲ್ಲಾ ಯುವಕರಿಗೂ ತಲುಪಿಸಲು ಅಧಿಕಾರಿಗಳು ಪದವಿ ಹೊಂದಿದವರಿಗೆ ನೊಂದಾಯಿಸಿಕೊಳ್ಳಲು ಪದವಿ ಕಾಲೇಜುಗಳಿಗೆ ಹೋಗಿ ಉತ್ತೇಜನ ನೀಡಲು ಪ್ರಚಾರ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಶಕ್ತಿ ಯೋಜನೆ ಎಲ್ಲಾ ಮಹಿಳೆಯರಿಗೆ ಪ್ರತಿಶತ ನೂರರಷ್ಟು ಉಪಯೋಗಿಸ್ತಿದ್ದು ವಿದ್ಯಾರ್ಥಿಗಳಿಗಾಗಿ ಹಳ್ಳಿಯಿಂದ ರೋಣಕ್ಕೆ ಪಟ್ಟಣಕ್ಕೆ ಬರಲು ಹೋಗಲು ಸಮಯಕ್ಕೆ ಸರಿಯಾಗಿ ಇನ್ನು ಹೆಚ್ಚಿನ ಬಸ್ಸಿನ ವ್ಯವಸ್ಥೆ ಮಾಡಬೇಕು ಮತ್ತು ಬಸ್ ನಿಲ್ದಾಣವನ್ನ ಸ್ವಚ್ಛವಾಗಿ ಇಡಬೇಕು ಮಹಿಳೆಯರಿಗಾಗಿ ಹೆಚ್ಚಿನ ಆಸನ ವ್ಯವಸ್ಥೆ, ಮಕ್ಕಳಿಗೆ, ಶಿಶು ಪಾಲನಾ ಕೇಂದ್ರ ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ ಮಾಡಬೇಕು ಶೌಚಾಲಯ ಗಳನ್ನು ಸ್ವಚ್ಛವಾಗಿ ಇಡಲು ಅಧಿಕಾರಿಗಳು ದಕ್ಷವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ರೋಣ ತಾಲೂಕ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸಂಗನಗೌಡ. (ಮಿಥುನ್) ಜಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಪರಶುರಾಮ ಅಳಗವಾಡಿ. ತಾಲೂಕ ಗ್ಯಾರಂಟಿ ಸಮಿತಿಯ ಸದಸ್ಯರಾದ ಶಫೀಕ್ ಮೂಗನೂರ, ಬಿ.ಎಸ್. ರೆಡ್ಡಿರ, ಸಂಗು ನವಲಗುಂದ, ಮೇಘರಾಜ್ ಬಾವಿ, ಸಿದ್ದಪ್ಪ ಯಾಳಗಿ, ಹನುಮಂತಪ್ಪ ಸ್ವಾಲದ, ಶ್ರೀಮತಿ ನಾಜಬೇಗಂ ಎಲಿಗಾರ, ಬಸವರಾಜ್ ತಳವಾರ, ಸುರೇಶ್ ಬಸವ ರೆಡ್ಡಿರ, ಯಲ್ಲಪ್ಪ ಕಿರೆಸೂರು, ಬಸವರಾಜ್ ಜಗ್ಗಲ, ಶಿವಪ್ಪ ಗಾಣಿಗೇರ, ಶ್ರೀಮತಿ. ಗೀತಾ ಕೊಪ್ಪದ, ಶರಣಪ್ಪ ಕುರಿಯವರ ಹಾಗೂ ತಾಲೂಕ ಮಟ್ಟದ ಐದು ಗ್ಯಾರಂಟಿಗಳ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande