ಕೋಲಾರ, ೧೨ ಜುಲೈ (ಹಿ.ಸ) :
ಆ್ಯಂಕರ್ : ಸಮಾಜ ಸೇವೆ ದೇವರ ಸೇವೆಯಾಗಿದ್ದು ಅದು ಒಳ್ಳೆಯ ಮನಸ್ಸು ಇರುವ ಜನರ ಬಳಿ ಮಾತ್ರವೇ ಇರುತ್ತದೆ ಎಂದು ರೋಟರಿ ಕೋಲಾರ ಸೆಂಟ್ರಲ್ ನೂತನ ಅಧ್ಯಕ್ಷ ಕೆ.ಎಚ್.ನಾಗರಾಜ್ ಹೇಳಿದರು.
ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಸಂಜೆ ನಡೆದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಸೇವೆಯನ್ನು ಜೀವನಪರ್ಯಂತ ಮುಂದುವರಿಸಲಾಗುವುದು. ಪದವಿ-ಅಧಿಕಾರಕ್ಕಾಗಿ ಬಂದವನಲ್ಲ. ನಿಸ್ವಾರ್ಥ ಸೇವೆ ಮಾಡಲು ಬಂದಿದ್ದೇನೆ ಹಾಗಾಗಿ ರೋಟರಿ ಅಧ್ಯಕ್ಷರಾಗಿ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ರೋಟರಿ ಕೋಲಾರ ನಂದಿನಿ ಅಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿ, ಪ್ರಕೃತಿ ಅದರ ಪಾಡು ಅದು ಸೇವೆ ಮಾಡಿಕೊಂಡು ಹೋಗುತ್ತಿದ್ದು, ಇದರಿಂದ ನಾವು ಪಾಠ ಕಲಿತು, ಅನ್ಯರಿಗೆ ಸಹಾಯ ಮಾಡುವ, ಸೇವೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೆಲವರಿಗೆ ಮಾತ್ರ ಹೃದಯವಂತಿಕೆ ಇರುತ್ತದೆ. ನಾವು ಸಹ ಅಂತಹವರ0ತಾಗೋಣವೆ0ದರು.
ರೋಟರಿ ಕ್ಲಬ್ ಡಿಜಿಎನ್ ಹರಣಿ ರವೀಂದ್ರನಾಥ್ ಮಾತನಾಡಿ, ಒಂದು ಸಂಸ್ಥೆಯು ಬೆಳೆಯಬೇಕಾದರೆ ಸಹಕಾರ ಬೆಂಬಲ ಅತ್ಯಗತ್ಯ. ಸದಸ್ಯತ್ವ ಹೆಚ್ಚು ಮಾಡುವ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು. ಸಂಸ್ಥೆ ಅಡಿಯಲ್ಲಿ ಸೇವೆ ಕೈಗೊಳ್ಳುವ ಸದಸ್ಯರು ಹೆಚ್ಚು ಪ್ರಚಾರ ಪಡೆದು, ಇನ್ನಿತರರು ಇಷ್ಟಪಟ್ಟು ಬರುವ ರೀತಿ ನಡೆದುಕೊಳ್ಳಬೇಕು. ನೂತನ ಅಧ್ಯಕ್ಷರು ಎಲ್ಲರನ್ನೂ ಹೊಂದಿಕೊAಡು ಹೋಗುವ ನಿಟ್ಟಿನಲ್ಲಿ ಸೇವೆ ಕೈಗೊಳ್ಳಿ ಎಂದು ತಿಳಿಸಿದರು.
ಈ ವೇಳೆ ರೋಟರಿ ಕೋಲಾರ ಸೆಂಟ್ರಲ್ ಹಾಗೂ ರೋಟರಿ ಕೋಲಾರ ನಂದಿನಿ ಸಂಸ್ಥೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕೋಲಾರ ಸೆಂಟ್ರಲ್ ನಿಕಟ ಪೂರ್ವ ಅಧ್ಯಕ್ಷ ಎಸ್.ಸುಧಾಕರ್, ಜಿಲ್ಲಾ ಕಾರ್ಯದರ್ಶಿ ಎನ್.ರವೀಂದ್ರನಾಥ್, ಜೋನಲ್ ಅಧೀಕ್ಷಕ ಡಾ.ಸಿ.ಎ.ಮುರುಳಿಧರ, ಕಾರ್ಯದರ್ಶಿ ಕೆ.ಎನ್.ಪ್ರಕಾಶ್, ಹಿರಿಯ ಪತ್ರಕರ್ತ ಕೆ.ಎಸ್.ಗಣೇಶ್, ನಾಗಾನಂದ ಕೆಂಪರಾಜ್, ಸದಸ್ಯರಾದ ಕುರ್ಕಿ ರಾಜೇಶ್ವರಿ, ಚಂದ್ರಶೇಖರ್, ರಘು ಚಿಟ್ಟಿ, ಮಂಜುನಾಥ್, ಎಪಿಎಂಸಿ ಪುಟ್ಟರಾಜು, ಶಶಿಕಾಂತ್, ಸುರೇಶ್, ಬಾಬು, ರಮೇಶ್ ನಾಯಕ್, ಮುರುಳಿ ಗೌಡ, ಶ್ರೀನಾಥ್, ರಾಜಕುಮಾರ್, ಮಂಜುನಾಥ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ರೋಟರಿ ಸೆಂಟ್ರಲ್ ನೂತನ ಅಧ್ಯಕ್ಷರಾಗಿ ಕೆ.ಎಚ್.ನಾಗರಾಜ್ ಹಾಗೂ ತಂಡದವರ ಪದಗ್ರಹಣ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್