ಕೋಲಾರ, ೧೨ ಜುಲೈ (ಹಿ.ಸ) :
ಆ್ಯಂಕರ್ : ಕೋಲಾರದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಒಂದು ಅಪರೂಪದ ಘಟನೆಗೆ ಸಾಕ್ಷಯಾಯಿತು. ಇನ್ನೆಂದಿಗೂ ನಿನ್ನ ಮುಖ ನಾನು ನೋಡುವುದಿಲ್ಲ. ನನ್ನ ಮುಖ ನೀನು ನೋಡಬೇಡ ಎಂದು ಜಗಳವಾಡುತ್ತಾ ವಿಚ್ಛೇದನಕ್ಕೆ ಬಂದಿದ್ದ ದಂಪತಿಗಳ ಕೋಪ, ತಾಪ, ದ್ವೇಶ ಮಂಜಿನ0ತೆ ಕರಗಿ ಹೋಯಿತು. ಕುಟುಂಬ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳನ್ನು ಮರೆತು ಒಂದುಗೂಡಿದರು. ಈ ಅಪರೂಪದ ಘಟನೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮಂಜುನಾಥ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡರು, ವಕೀಲರು ಹಾಗೂ ಸಂಧಾನಕಾರರು ಸಾಕ್ಷಿಯಾದರು.
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆಧುನಿಕ ಕಾಲ ಘಟ್ಟದಲ್ಲಿ ಗಂಡ ಹೆಂಡತಿ ಜಗಳವಾಡಿ ವಿಚ್ಛೇದನಕ್ಕೆ ನ್ಯಾಯಾಲಯದ ಕದ ತಟ್ಟುತ್ತಾರೆ. ದಂಪತಿಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ವಿಚ್ಛೇದನ ಕೋರಿ ಸಲ್ಲಿಸಲಾಗಿದ್ದ ಪ್ರಕರಣಗಳನ್ನು ನ್ಯಾಯಾಧೀಶರು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ದಂಪತಿಗಳನ್ನು ಒಂದುಗೂಡಿಸಿದರು.
ಕೋಲಾರ ಜಿಲ್ಲೆಯಾಧ್ಯಂತ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳ ಮನವೊಲಿಸಿ ಒಂದುಗೂಡಿಸಲಾಯಿತು.
ಕೋಲಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ಮಾತನಾಡಿ ದಂಪತಿಗಳ ನಡುವೆ ಬಿರುಕು ಮೂಡಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ಕಲಹದಿಂದ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ವಿಚ್ಛೇದನವೇ ಗಂಡ ಹೆಂಡತಿಯ ಜಗಳಕ್ಕೆ ಅಂತಿಮ ಪರಿಹಾರ ಎಂದು ನಂಬಿ ವಿಚ್ಛೇದನಕ್ಕಾಗಿ ಹಲವಾರು ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗೇಗೌಡರು ಕುಟುಂಬ, ದಾಂಪತ್ಯ ಮತ್ತು ಸಾಮರಸ್ಯದಿಂದ ಬದುಕುವಂತೆ ಮನವೊಲಿಸಿದರು. ನ್ಯಾಯಾಧೀಶರ ಆಪ್ತ ಸಮಾಲೋಚನೆಯಿಂದ ವಿಚ್ಛೇದನ ಪಡೆಯುವುದಾಗಿ ಜಗಳವಾಡುತ್ತಾ ಬಂದವರು ಮತ್ತೆ ಒಂದು ಗೂಡಿದರು. ನ್ಯಾಯಾಧೀಶರು ಮತ್ತು ವಕೀಲರು ಕುಟುಂಬ ಮತ್ತು ದಾಂಪತ್ಯ ಜೀವನದ ಮಹತ್ವದ ಬಗ್ಗೆ ತಿಳಿಸಿ ದಂಪತಿಗಳನ್ನು ಒಂದುಗೂಡಿಸಿದರು. ಜಗಳವಾಡುತ್ತಾ ನ್ಯಾಯಾಲಯಕ್ಕೆ ಬಂದ ದಂಪತಿಗಳು ಒಂದುಗೂಡಿ ಅನ್ಯೋನ್ಯವಾಗಿ ತೆರಳಿದರು ಎಂದು ಸಂತಸ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಶನಿವಾರ ಕೋಲಾರ ಜಿಲ್ಲೆಯಾದ್ಯಂತ ರಾಷ್ಟಿçÃಯ ಲೋಕ ಅದಾಲತ್ ನಡೆಯಿತು. ನ್ಯಾಯಾಲಯಗಳಲ್ಲಿ ಬಾಕಿ ಇರವ ಸಿವಿಲ್ ಪ್ರಕರಣಗಳು ರಾಜೀ ಆಗಬಹುದಾದ ಕ್ರಮಿನಲ್, ವಿಮಾ ಪರಿಹಾರ, ರೈತರ ಸಾಲದ ಪ್ರಕರಣಗಳು ಹಾಗೂ ಕೌಟುಂಬಿಕ ಪ್ರಕರಣಗಳು ಸೇರಿದಂತೆ ವಿವಿಧ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಸಂಧಾನಕಾರರಾದ ವಕೀಲ ಲಕ್ಷಿö್ಮÃನಾರಾಯಣ್ ಮಾತನಾಡಿ ರಾಷ್ಟಿçÃಕೃತ ಬ್ಯಾಂಕುಗಳಿಗೆ ರೈತರು ಪಾವತಿ ಮಾಡಬೇಕಾದ ಸಾಲದ ಪ್ರಕರಣಗಳನ್ನು ಸಂದಾನದ ಮೂಲಕ ಇತ್ಯರ್ಥಪಡಿಸಲಾಯಿತು. ಶ್ರೀನಿವಾಸ್ ಎಂಬುವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿAದ ಕೃಷಿ ಸಾಲ ಪಡೆದು ನಾಲ್ಕು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಪಾವತಿ ಮಾಡಬೇಕಾಗಿತ್ತು. ನ್ಯಾಯಾಧೀಶರು ಸಂಧಾನ ನಡೆಸಿ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಪಾವತಿ ಮಾಡುವಂತೆ ಇತ್ಯರ್ಥಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದರು ಎಂದು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋಲಾರ ಜಿಲ್ಲೆಯ ಪ್ರಾದೇಶಿಕ ಜನರಲ್ ಮ್ಯಾನೇಜರ್ ಬಾಬು ಸೋಮಣ್ಣ ಮಾತನಾಡಿ ರೈತರ ಕೃಷಿ ಸಾಲಗಳ ವಸೂಲಾತಿಗಾಗಿ ಮೂರು ಸಾವಿರ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ದಾಖಲಿಸಲಾಗಿತ್ತು. ಹಲವಾರು ಪ್ರಕರಣಗಳು ಇತ್ಯರ್ಥವಾಗಿ ಶನಿವಾರ ರೈತರು ಎರಡು ಕೋಟಿ ರೂಪಾಯಿ ಸಾಲ ಮರು ಪಾವತಿ ಮಾಡಿದರು ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಆರ್.ನಟೇಶ್ ಮಾತನಾಡಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಸಿವಿಲ್, ಕ್ರಿಮಿನಲ್, ವಿಮಾ ಪರಿಹಾರ ಸೇರಿದಂತೆ ಒಂದು ಲಕ್ಷ ಐವತ್ತಾರು ಸಾವಿರ ಎಂಟು ನೂರು ಅರವತ್ತು (೧೫೬೮೬೦) ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು ನಲವತ್ತ ಒಂಬತ್ತು ಕೋಟಿ ಎಪತ್ತಮೂರು ಲಕ್ಷ ಪರಿಹಾರ ಕಲ್ಪಿಸಲಾಯಿತು ಎಂದು ತಿಳಿಸಿದರು.
ಚಿತ್ರ : ಕೋಲಾರ ಕೌಟುಂಬಿಕ ನ್ಯಾಯಾಲಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗಿದ್ದ ದಂಪತಿಗಳ ಮನವೊಲಿಸಿ ಮತ್ತೆ ಒಂದುಗೂಡಿಸಲಾಯಿತು. ಚಿತ್ರದಲ್ಲಿ ಜಿಲ್ಲಾ ಮತ್ತು ಸೆೆಷನ್ಸ್ ಪ್ರಧಾನ ನ್ಯಾಯಾಧೀಶ ಮಂಜುನಾಥ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ಭೈರಾರೆಡ್ಡಿ ಮುಂತಾದವರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್