ಧಾರವಾಡ, 12 ಜುಲೈ (ಹಿ.ಸ.) :
ಆ್ಯಂಕರ್ : ಧಾರವಾಡದ ಮನಗುಂಡಿಯ ಚನ್ನಯ್ಯಗಿರಿಯ ಶ್ರೀ ಗುರುಬಸವ ಮಹಾಮನೆಯ ೨೦ನೇ ವಾರ್ಷಿಕೋತ್ಸವವು ವೈಭವದಿಂದ ಜರುಗಿತು. ಕಾರ್ಯಕ್ರಮದಲ್ಲಿ ವಚನಹೃದಯ ಗ್ರಂಥದ ಎರಡನೇ ಮುದ್ರಣ ಬಿಡುಗಡೆ, ರಕ್ತದಾನ ಶಿಬಿರ ಹಾಗೂ 26ನೇ ಬೆಳದಿಂಗಳ ಪಾದಯಾತ್ರೆ ನಡೆಯಿತು. ನಿಸರ್ಗ ಜ್ಞಾನಾಮೃತ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, “ಶ್ರೀ ಗುರುಬಸವ ಮಹಾಮನೆ ಧಾರ್ಮಿಕತೆ ಜೊತೆಗೆ ಪರಿಸರ ಜಾಗೃತಿಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ,” ಎಂದು ಶ್ಲಾಘಿಸಿದರು.
ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಸವಾನಂದ ಸ್ವಾಮಿಗಳು, ಪ್ರಸನ್ನಾನಂದ ಸ್ವಾಮಿಗಳು, ಓಂಕಾರೇಶ್ವರಿ ಮಾತೆ, ಶಿವದೇವಿ ಮಾತಾಜಿ, ವಿರತೀಶಾನಂದ ಸ್ವಾಮಿಗಳು, ಲಿಂಗಾನಂದಪ್ರಭುರು ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ನಾಗರಾಜ ಛಬ್ಬಿ, ಭಾಜಪಾ ಜಿಲ್ಲಾ ಅಧ್ಯಕ್ಷ ನಿಂಗಪ್ಪಾ ಸುತಗಟ್ಟಿ ಹಾಗೂ ಭಕ್ತರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa