ಮುಂಬಯಿ, 28 ಜೂನ್ (ಹಿ.ಸ.) :
ಆ್ಯಂಕರ್ : ನಟಿ ಶೆಫಾಲಿ ಜರಿವಾಲಾ (42) ಕಳೆದ ರಾತ್ರಿ ಎದೆನೋವಿನಿಂದ ಬಳಲುತ್ತಿದ್ದ ನಂತರ ಮುಂಬೈನ ಬೆಲ್ಲೆವ್ಯೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಒಳಪಡಿಸುವ ಮುನ್ನವೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಪ್ರಾಥಮಿಕ ವರದಿಯಂತೆ ಹೃದಯಾಘಾತ ಶಂಕೆಯಿದೆ, ಆದರೆ ಅಧಿಕೃತ ಮಾಹಿತಿಗಾಗಿ ಶವವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಶನಿವಾರ ಬೆಳಿಗ್ಗೆ ಅವರ ಅಂಧೇರಿ ನಿವಾಸಕ್ಕೆ ತೆರಳಿ , ಪರಿಶೀಲನೆ ನಡೆಸಿದೆ. ಕುಟುಂಬದವರು ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಬಗ್ಗೆ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಶೆಫಾಲಿ ‘ಕತಾ ಲಗಾ’, ನಾಚ್ ಬಲಿಯೇ ಮತ್ತು ಬಿಗ್ ಬಾಸ್ 13 ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಹೆಸರು ಮಾಡಿದ್ದರು.
ಮುಂಬೈ ಪೊಲೀಸರು ಸಾವಿನ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa