ಮಣಿಪುರ : ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಉಗ್ರರ ಬಂಧನ
ಇಂಫಾಲ, 28 ಜೂನ್ (ಹಿ.ಸ.) : ಆ್ಯಂಕರ್ : ಮಣಿಪುರದಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ರಾಜ್ಯ ಪೊಲೀಸರ ತಂಡ ಒಟ್ಟು ಆರು ಉಗ್ರರನ್ನು ಬಂಧಿಸಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ತಂಗ್ಮೈಬಂದ್ ತಿಂಗೇಲ್ ಲೈಕೈಯಲ್ಲಿ ಮೂವರು – ಅಹಿಬಮ್ ಜಾನ್ಸನ್ ಸಿಂಗ್ (27), ನಿಂಗ್ಥೌಜಮ್ ಸ್ಕೋಲಿಯಾ ದೇವಿ (25) ಮತ
Arrest


ಇಂಫಾಲ, 28 ಜೂನ್ (ಹಿ.ಸ.) :

ಆ್ಯಂಕರ್ : ಮಣಿಪುರದಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ರಾಜ್ಯ ಪೊಲೀಸರ ತಂಡ ಒಟ್ಟು ಆರು ಉಗ್ರರನ್ನು ಬಂಧಿಸಿದೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ತಂಗ್ಮೈಬಂದ್ ತಿಂಗೇಲ್ ಲೈಕೈಯಲ್ಲಿ ಮೂವರು – ಅಹಿಬಮ್ ಜಾನ್ಸನ್ ಸಿಂಗ್ (27), ನಿಂಗ್ಥೌಜಮ್ ಸ್ಕೋಲಿಯಾ ದೇವಿ (25) ಮತ್ತು ಸಲಾಮ್ ಬಿನಿತಾ ದೇವಿ (22) ಎಂಬವರನ್ನು ಬಂಧಿಸಲಾಗಿದೆ.

ಇಂಫಾಲ್ ಪೂರ್ವದ ವಾಂಗ್ಖೈ ನಿಂಗ್ಥೆಮ್ ಪುಖ್ರಿ ಮಾಪಲ್‌ನಿಂದ ಇಬ್ಬರು ಕೆಸಿಪಿ (ಪಿಡಬ್ಲ್ಯೂಜಿ) ಸದಸ್ಯರು – ಲೈಶ್ರಾಮ್ ಸೂರಜ್ ಸಿಂಗ್ (33) ಮತ್ತು ಅಶಾಂಗ್ಬಿ ದೇವಿ (34) – ವಶಕ್ಕೆ ಪಡೆದಿದ್ದಾರೆ. ಅವರಿಂದ ₹10,000 ನಗದು, ಮೊಬೈಲ್‌ಗಳು, ಸ್ಕೂಟರ್ ಹಾಗೂ ಆಧಾರ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಚಿಂಗ್ರೆಲ್ ತೇಜ್‌ಪುರದಲ್ಲಿ ನೊಂಗ್ಮೆಕ್‌ಪಮ್ ಜಿಲಿಶ್ ಮೈಟೈ (29) ಎಂಬಾತನನ್ನು ಬಂಧಿಸಿದ್ದು, ಅವನು ಖಾಸಗಿ ಸಂಸ್ಥೆಗಳಿಂದ ಸುಲಿಗೆ ನಡೆಸುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande