ಕೊಪ್ಪಳ, 10 ಜೂನ್ (ಹಿ.ಸ.) :
ಆ್ಯಂಕರ್ : ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೇನಹಳ್ಳಿ ಗ್ರಾಮದ ಎನ್.ಪೋತಣ್ಣ ತಂ. ನಿಂಗಣ್ಣ (40) ಕಾಣೆಯಾಗಿದ್ದಾರೆ ಎಂದು ಮುನಿರಾಬಾದ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮುನಿರಾಬಾದ್ ಠಾಣೆಗೆ ಅಥವಾ ಎಸ್.ಪಿ ಕೊಪ್ಪಳ ದೂ.ಸಂ: 08539-230111, ಕೊಪ್ಪಳ ಉಪ ವಿಭಾಗದ ಡಿಎಸ್ಪಿ ದೂ.ಸಂ: 08539-222433, ಕೊಪ್ಪಳ ಗ್ರಾಮೀಣ ವೃತ್ತದ ಸಿ.ಪಿ.ಐ ದೂ.ಸಂ: 08539-221333, ಮುನಿರಾಬಾದ್ ಪಿ.ಎಸ್.ಐ ದೂ.ಸಂ: 08539-270333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್