ವಿಜಯಪುರ, 09 ಮೇ (ಹಿ.ಸ.) :
ಆ್ಯಂಕರ್ : ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾದ ಉಗ್ರರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸುತ್ತಿರುವ ನಮ್ಮ ಭಾರತೀಯ ವೀರ ಸೈನಿಕರಿಗೆ ಮತ್ತುಷ್ಟು ಶಕ್ತಿ, ಆತ್ಮ ಸ್ಥೈರ್ಯ ಪ್ರಾಪ್ತಿಯಾಗಲೆಂದು ವಿಜಯಪುರ ನಗರದ ಆರಾಧ್ಯದೈವ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಘಕಟದಿಂದ ಸಂಸದರಾದ ರಮೇಶ ಜಿಗಜಿಣಗಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರಲಿಂಗಪ್ಪ ಅಂಗಡಿ ಅವರು ಮಾತನಾಡಿ, ಭಾರತ ದೇಶದ ಮೇಲೆ ನಿರಂತರವಾಗಿ ಭಯೋತ್ಪಾದನೆ ಚಟುವಟಿಕೆ ನಡೆಸುತಿರುವ ನೆರೆಯ ರಾಷ್ಟ್ರ ಪಾಕಿಸ್ತಾನದ ಯಾವುದೇ ಭಯೋತ್ಪಾದಕರು ಇನ್ನೊಮ್ಮೆ ಭಾರತದ ಕಡೆ ತಲೆಹಾಕದಂತೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸೈನಿಕರು ಆಫರೇಶನ್ ಸಿಂಧೂರ ನಡೆಸುವ ಮೂಲಕ ಶತೃರಾಷ್ಟ್ರಕ್ಕೆ ತಕ್ಕ ಪಾಠವನ್ನು ಕಲಿಸುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ದೇಶದ ಭದ್ರತೆಗಾಗಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳೊಂದಿಗೆ ಭಾರತೀಯರಾದ ನಾವು ಜೊತೆಗೆ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಾಹಪೂರ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಕರ ಕವಟಗಿ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಜೋಗೂರ, ಚಿದಾನಂದ ಚಲವಾದಿ, ಉಮೇಶ ಕೋಳಕೂರ, ಸಂಜಯಪಾಟೀಲ ಕನಮಡಿ, ಭೀಮಾಶಂಕರ ಹದನೂರ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ವಿಜಯ ಜೊಶಿ, ರಾಜಕುಮಾರ ಸಗಾಯಿ, ಭೀಮಸಿಂಗ ರಾಠೋಡ, ಶ್ರೀಹರ್ಷಗೌಡ ಪಾಟೀಲ, ಮಂಜುನಾಥ ಮೀಸೆ, ಕಾಂತು ಶಿಂಧೆ, ಸುಮಂಗಲಾ ಕೋಟಿ, ರಾಜೇಶ ತವಸೆ, ಸಂದೀಪ ಪಾಟೀಲ, ಜಗದೀಶ ಮುಚ್ಚಂಡಿ, ಸಂತೋಷ ಭೋವಿ, ಉದಯ ಕನ್ನೊಳ್ಳಿ, ಪಾಪುಸಿಂಗ ರಜಪೂತ, ಸಂತೋಷ ನಿಂಬರಗಿ, ರಾಜು ವಾಲಿ, ಉಮೇಶ ವೀರಕರ, ಕಲ್ಮೇಶ ಹಿರೇಮಠ, ಡಿ.ಜಿ.ಬಿರಾದಾರ, ಸಂತೋಷ ಜಾಧವ, ಬಸು ಹಳ್ಳಿ, ಚಿನ್ನು ಚಿನಗುಂಡಿ, ರಾಜಶೇಖರ ಡೊಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande