ಕೋಲಾರ ತಾಲ್ಲೂಕಿನ ಹೋಳೂರಿನಲ್ಲಿ ಶುದ್ದ ನೀರಿನ ಘಟಕ ಪ್ರಾರಂಭ
ಕೋಲಾರ ತಾಲ್ಲೂಕಿನ ಹೋಳೂರಿನಲ್ಲಿ ಶುದ್ದ ನೀರಿನ ಘಟಕ ಪ್ರಾರಂಭ
ಕೋಲಾರ ತಾಲ್ಲೂಕಿನ ಹೋಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಉದ್ಘಾಟಿಸಿದರು.


ಕೋಲಾರ, ಮೇ.೦೯ (ಹಿ.ಸ) :

ಆ್ಯಂಕರ್ : ಜನರ ಆರೋಗ್ಯ ಉತ್ತಮವಾಗಿರಲು ಶುದ್ಧ ಕುಡಿಯುವ ನೀರು ಅವಶ್ಯವಾಗಿದ್ದು ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಅಧ್ಯತೆ ನೀಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ತಿಳಿಸಿದರು.

ಕೋಲಾರ ತಾಲ್ಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹೋಳೂರು ಗ್ರಾಮದಲ್ಲಿ ವಿಧಾನ ಪರಿಷತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಇಂದು ಜೀವಿಗಳಿಗೆ ಗಾಳಿಯಂತೆ ನೀರೂ ಅತ್ಯಾವಶ್ಯಕ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ಧ ನೀರನ್ನು ಕುಡಿಯಿರಿ. ಫ್ಲೋರೈಡ್ ಯುಕ್ತ ನೀರಿನಿಂದ ಮೂಳೆ ಸವೆತ ಹಲ್ಲು ಕಳೆ ಕಟ್ಟುವುದು ಗರ್ಭಿಣಿಯರಿಗೆ ಸಮಸ್ಯೆಗಳು. ಜನರಿಗೆ ಕುಡಿಯಲು ಉತ್ತಮ ಶುದ್ಧ ನೀರು ಘಟಕ ಇದ್ದು ಗ್ರಾಮಸ್ಥರು ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ, ಯುವ ಕಾಂಗ್ರೆಸ್ ಮುಖಂಡ ಜನಪನಹಳ್ಳಿ ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ಸದಸ್ಯರಾದ ಕೆಂಬತ್ತನಹಳ್ಳಿ ನಾರಾಯಣಸ್ವಾಮಿ, ಶ್ರೀರಾಮಪ್ಪ, ಗಟ್ಟಹಳ್ಳಿ ವೆಂಕಟರೆಡ್ಡಿ, ಕೊಂಡಸ0ದ್ರ ಚಂದ್ರಪ್ಪ, ಡೇರಿ ಶ್ರೀನಿವಾಸ್, ಮುಖಂಡರಾದ ಅರಿಕುಂಟೆ ಶ್ರೀನಿವಾಸ್, ವೆಂಕಟೇಶ್, ಶ್ರೀರಾಮರೆಡ್ಡಿ, ಹೆಚ್.ಆರ್.ನಾರಾಯಣಸ್ವಾಮಿ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ಆರಿಕುಂಟೆ ಆನಂದ್, ಎಂ.ಆರ್ ಬಾಬು, ನಾಗರಾಜ್, ಮಾರೇನಹಳ್ಳಿ ಸೀನಪ್ಪ ಶ್ರೀರಾಮಪ್ಪ, ಮುಂತಾದವರು ಇದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ಹೋಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande