ವಿದ್ಯಾರ್ಥಿಗಳು ಕೌಶಲ್ಯಕ್ಕೆ ಆದ್ಯತೆ ನೀಡಲು ಡಾ. ಎ.ಪ್ರಭಾಕರ್‌ ರೆಡ್ಡಿ ಕರೆ
ವಿದ್ಯಾರ್ಥಿಗಳು ಕೌಶಲ್ಯಕ್ಕೆ ಆದ್ಯತೆ ನೀಡಲು ಡಾ. ಎ.ಪ್ರಭಾಕರ್‌ರೆಡ್ಡಿ ಕರೆ
ಕೋಲಾರ ನಗರದ ಹೊರವಲಯದ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.


ಕೋಲಾರ, ೦೯ ಮೇ (ಹಿ.ಸ) :

ಆ್ಯಂಕರ್ : ವಿದ್ಯಾರ್ಥಿಗಳು ಕೇವಲ ಸರ್ಟಿಫಿಕೇಟ್ ಪಡೆಯಲು ಅಷ್ಟೇ ಸೀಮಿತಗೊಳ್ಳದೇ ಉದ್ಯೋಗ ಪಡೆಯುವಂತ ಕೌಶಲ್ಯವನ್ನು ಪಡೆದಾಗ ಮಾತ್ರವೇ ವಿದ್ಯೆಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಸಿ.ಬೈರೇಗೌಡ ತಾಂತ್ರಿಕ ವಿದ್ಯಾಲಯದ ಅಧ್ಯಕ್ಷ ಡಾ.ಎ ಪ್ರಭಾಕರ್ ರೆಡ್ಡಿ ತಿಳಿಸಿದರು.

ನಗರ ಹೊರವಲಯದ ತೊರದೇವಂಡಹಳ್ಳಿಯ ಸಿ.ಬೈರೇಗೌಡ ತಾಂತ್ರಿಕ ವಿದ್ಯಾಲಯದ ೨೦೨೫ ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು ಯುವ ಪೀಳಿಗೆ ತಮಗೆ ಆಸಕ್ತಿ ಇರುವ ಕೋರ್ಸುಗಳನ್ನು ಪಡೆದು ತಮ್ಮ ಗುರಿ ಸಾಧಿಸಬೇಕು ಇಷ್ಟವಿಲ್ಲದ ಕೋರ್ಸುಗಳನ್ನು ಪಡೆದು ಶಿಕ್ಷಣದಿಂದ ದೂರ ಉಳಿಯಬಾರದು ಬದುಕಿಗೆ ದಾರಿ ಮತ್ತು ಮಾರ್ಗಗಳನ್ನು ಹೊಂದಿರುವ ಶಿಕ್ಷಣವು ನಿಮ್ಮದಾಗಲಿ ಎಂದು ಆಶಿಸಿದರು.

ಇವತ್ತು ಶಿಕ್ಷಣವೇ ಎಲ್ಲವನ್ನೂ ನಿರ್ಧರಿಸಲಾಗಿದೆ ಉದ್ಯೋಗದಲ್ಲಿ ಹಣವೇ ಮಾನದಂಡವಾಗಿದೆ ಆದರೆ ಮನುಷ್ಯನ ಆರೋಗ್ಯ ಮತ್ತು ಶರೀರವು ಮುಖ್ಯವಾಗಬೇಕು ಕೆಲಸದ ಒತ್ತಡದ ಮಧ್ಯೆ ಟಾರ್ಗೆಟ್ ನಿಂದ ಮಾನಸಿಕವಾಗಿ ಹಿನ್ನಡೆಯಾಗುತ್ತದೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡು ಹೋಗಬೇಕು ನಿಮ್ಮಲ್ಲಿ ಇರುವ ಕೌಶಲ್ಯವನ್ನು ಯಾರು ಕಸಿಯಲು ಸಾಧ್ಯವಿಲ್ಲ ಎಂದರು.

ಸAಸ್ಥೆಯ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ ಮಾತನಾಡಿ ವಿಧ್ಯಾರ್ಥಿಗಳು ಪೋಷಕರ ಆಶಯಗಳನ್ನು ಗೌರವಿಸಿ ಶೈಕ್ಷಣಿಕ ಸಾಧನೆ ಮಾಡುವತ್ತ ಗಮನ ಹರಿಸಬೇಕು ನಿಮ್ಮ ಸಾಧನೆಯನ್ನು ಕಂಡು ಸಂತಸ ಪಡಲು ಪೋಷಕರು ಪಡುವ ಶ್ರಮಕ್ಕೆ ಬೆಲೆಕಟ್ಟಲಾಗದು ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆ ಮಾಡಿ ಪರಿಶ್ರಮದಿಂದ ಮುಂದೆ ಸಾಗಲು ಪ್ರಯತ್ನಿಸಿ. ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.

ವಿಶೇಷ ಅಥಿತಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ರಾಮಾನುಜಮ್ ಮಾತನಾಡಿ ವಿಧ್ಯಾರ್ಥಿಗಳ ಶೈಕ್ಷಣಿಕ ಬದುಕು ತುಂಬಾ ಕಷ್ಟವಾಗಿದೆ ತಾಂತ್ರಿಕ ಶಿಕ್ಷಣ ಪೂರೈಸಿದವರಿಗೆ ತಾಂತ್ರಿಕ ಕ್ಷೇತ್ರದಲ್ಲಿ ಮಾತ್ರ ದಾರಿ ಎಂಬ ತಪ್ಪು ನಂಬಿಕೆ ಇದೆ. ನೀವೂ ಪದವೀಧರರೆ ನೀವು ಇತರ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಆಲೋಚನೆ ಬೆಳೆಸಿಕೊಳ್ಳಬಹುದು. ಅಂತಹ ಅನೇಕ ಸಾಧಕರು ನಮ್ಮ ಕಣ್ಣ ಮುಂದೆ ಇದ್ದಾರೆ. ಅವರ ಆದರ್ಶ ನಿಮ್ಮದಾಗಿಸಿಕೊಳ್ಳಿ ಎಂದರು.

ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ೪೫ ಎಲೆಕ್ಟ್ರಾನಿಕ್ಸ್ ವಿಭಾಗದ ೩೦, ಕಂಪ್ಯೂಟರ್ ಸೈನ್ಸ್ ವಿಭಾಗದ ೧೦೬ ಹಾಗೂ ಸಿವಿಲ್ ವಿಭಾಗದ ೧೨, ಮೆಕಾನಿಕಲ್ ೫ ಸೇರಿದಂತೆ ಒಟ್ಟು ೧೯೯ ವಿಧ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್ ಚಂದ್ರಶೇಖರ, ವಿವಿಧ ವಿಭಾಗಗಳ ಮುಖ್ಯಸ್ಥರಾದ ದೀಪಿಕಾ ಲೋಕೇಶ್, ವಾಸುದೇವ, ಶಿವರಾಜ್, ವೆಂಕಟೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರ : ಕೋಲಾರ ನಗರದ ಹೊರವಲಯದ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande