ಗದಗ, 09 ಮೇ (ಹಿ.ಸ.) :
ಆ್ಯಂಕರ್ : ಉಗ್ರರ ನೆಲೆಗಳ ಮೇಲೆ ಭಾರತೀಯ ಸೈನಿಕರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ವತಿಯಿಂದ ನಗರದ ಕಿಲ್ಲಾ ಓಣಿಯಲ್ಲಿರುವ ಜೋಡ್ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗು ಅಭಿಷೇಕ ಸಲ್ಲಿಸಲಾಯಿತು.
ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ. ಪಹಲಗಾಂನಲ್ಲಿ ಅಮಾಯಕರ ಹತ್ಯೆ ಖಂಡಿಸಿ ಅದರ ಪ್ರತಿಕಾರಕ್ಕಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ಯಶಸ್ಸು ಕಂಡಿರುವ ನಮ್ಮ ಸೈನಿಕರಿಗೆ ಹಾಗು ದೇಶದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀರವರ ಯಶಸ್ಸು, ಆರೋಗ್ಯ, ಆಯುಷ್ಯ ಹೆಚ್ಚಿನ ರೀತಿಯಲ್ಲಿ ಲಭಿಸಲೆಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ವಿಶೇಷ ಪೂಜೆ ಹಾಗು ಅಭಿಷೇಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳ ದೇಶಪ್ರೇಮ ಹಾಗು ದೇಶದ ನಾಗರಿಕರ ಕಾಪಾಡಿಕೊಳ್ಳುವ ಅವರ ದಿಟ್ಟ ಹೆಜ್ಜೆ ಹಾಗು ಅವರ ದೈರ್ಯ ನೋಡಿದ ಪ್ರತೀಯೊಬ್ಬ ಪ್ರಜೆಗೂ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು ಹಾಗು ಭಾರತೀಯ ಕಾರ್ಯ ಶ್ಲಾಘನೀಯ ಇನ್ನೊಮ್ಮೆ ಭಾರತ ದೇಶದ ತಂಟೆಗೆ ಬಂದರೆ ಸೇನೆಯ ನಿರ್ಣಯ ಇದಕ್ಕಿಂತ ಕಠೋರವಾಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟ ಹಮ್ಮೆಯ ಸೈನಿಕರಿಗೆ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಜಿಲ್ಲಾ ವಕ್ತಾರ ಎಂ.ಎಂ.ಹಿರೇಮಠ ಮಾತನಾಡಿ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಸಂದರ್ಭೊಚಿತವಾಗಿ ಮಾತನಾಡಿದರು.
ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಸ್.ಕರೀಗೌಡ್ರ, ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ನಗರಸಭಾ ಸದಸ್ಯರುಗಳಾದ ಅನೀಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಶಶಿಧರ ದಿಂಡೂರ, ನಾಗರಾಜ ತಳವಾರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಪ್ರಮುಖರುಗಳಾದ ಕೆ.ಪಿ.ಕೋಟಿಗೌಡ್ರ, ಸುಧೀರ ಕಾಟಿಗರ, ಸಂಗನಾಳ ವಕೀಲರು, ರಾಚಯ್ಯ ಹೊಸಮಠ, ಮಂಜುನಾಥ ಶಾಂತಗೇರಿ, ಪಂಚಾಕ್ಷರಿ ಅಂಗಡಿ, ರವಿ ಮಾನ್ವಿ, ರಮೇಶ ಹತ್ತಿಕಾಳ, ಬಸವರಾಜ ಮಡಿವಾಳರ, ಬಸವರಾಜ ನರೆಗಲ್, ವಿನಾಯಕ ಹೊರಕೇರಿ, ರವಿ ಚವ್ಹಾಣ, ರಾಜು ಕಾಟಿಗರ, ನಾರಾಯಣ ಸಿಖಾಂದರ, ಸುನೀಲ ಬೇವಿನಕಟ್ಟಿ ಹಾಗು ಇನ್ನೂ ಹಲವಾರು ಪ್ರಮುಖರುಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP