ರಸ್ತೆ ನಿರ್ಮಾಣ-ಸವಾರರಿಗೆ‌ ಸಿದ್ಧವಾದ ಸುಸಜ್ಜಿತ ರಸ್ತೆ
ವಿಜಯಪುರ, 09 ಮೇ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ದಾದಾಮಟ್ಟಿ ರಸ್ತೆಯ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿದ್ದು ಬಹುತೇಕ ಮುಕ್ತಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ‌ಎಂ. ಬಿ‌. ಪಾಟೀಲ್ ತಿಳಿಸಿದರು. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾ
ರಸ್ತೆ


ವಿಜಯಪುರ, 09 ಮೇ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ದಾದಾಮಟ್ಟಿ ರಸ್ತೆಯ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿದ್ದು ಬಹುತೇಕ ಮುಕ್ತಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ‌ಎಂ. ಬಿ‌. ಪಾಟೀಲ್ ತಿಳಿಸಿದರು.

ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದ್ದು, ವೇಗದ ಸವಾರಿಗಿಂತಲೂ ಸುರಕ್ಷಿತ ಸವಾರಿ ಅತಿ ಮುಖ್ಯ ಎಂಬುದನ್ನು ನೆನಪಿನಲ್ಲಿರಿಸಿಕೊಂಡು ವಾಹನ ಚಲಿಸಿರಿ ಎಂದು‌ ಮನವಿ ಮಾಡಿದ್ದಾರೆ.

ಈ ಮುಂಚೆ ಈ ಹೊನಗನಹಳ್ಳಿ ಹಾಗೂ ದದಾಮಟ್ಟಿ‌ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಸಾವು ನೋವುಗಳನ್ನು ಹಳ್ಳಿ ರೈತಾಪಿ ಜನರು ಅನುಭವಿಸಿದ್ದರು.

ಇದಕ್ಕೆ ಕಾರಣ‌ ಕಳಪೆ ಗುಣಮಟ್ಟದ ಹಾಗೂ ದಶಕಗಳಿಂದ ಕಾಣದ ರಸ್ತೆ ರಿಪೇರಿ ಇಂದ ಮೇಲಿಂದ‌ ಮೇಲೆ ಅಪಘಾತಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು.

ಇದನ್ನು ಮನಗಂಡ ಸಚಿವ ಪಾಟೀಲ್ ತಕ್ಷಣವೇ ಸುಸಜ್ಜಿತ ಗುಣಮಟ್ಟದ ರಸ್ತೆ‌ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಸುಧಾರಿತ ರಸ್ತೆ ನಿರ್ಮಾಣವಾಗಿದ್ದು ವಾಹನ ಸವಾರರ ಬಳಕೆಗೆ‌ ಸಿದ್ಧವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande