ರಾಯಚೂರು, 09 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ಕ್ರಿಕೆಟ್ ಮಂಡಳಿಯಿಂದ ದೇಶದಾದ್ಯಂತ ನಡೆಯುತ್ತಿರುವ ಭಾರತೀಯ ಕ್ರಿಕೇಟ್ ಪ್ರೇಮಿಯರ್ ಲೀಗ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಐಪಿಎಲ್ ಕಪ್ ಗೆಲುವಿಗಾಗಿ ಉತ್ತರಾಖಂಡ ರಾಜ್ಯದ ಶ್ರೀ ಕೇದಾರನಾಥ ದೇವಸ್ಥಾನದಲ್ಲಿ ರಾಯಚೂರಿನ ಯುವಕ ನರೇಶ್ ಗುಡ್ಸಿ ಅವರು ಆರ್ ಸಿಬಿ ಲಾಂಚನದೊಂದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿದ್ದಾರೆ.
ಕ್ರಿಕೆಟ್ ಅಂದರೆ ದೇಶದಲ್ಲಿ ಅಲ್ಲದೆ ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ಕ್ರೀಡಾಪ್ರೇಮಿಗಳಿಗೆ ಇರುವಷ್ಟು ಕ್ರೇಜ್ ಬೇರೆಲ್ಲೂ ಇರಲಿಕ್ಕಿಲ್ಲ. ಟಿ-20 ಕಿರು ಕ್ರಿಕೆಟ್ ಬಂದ ಮೇಲಂತೂ ಈ ಕ್ರೀಡೆಯ ನೋಡುವ, ಆರಾಧಿಸುವ ವಿಧಾನವೇ ಬದಲಾಗಿದೆ. ಬೆಂಗಳೂರಿನ ಆರ್ ಸಿಬಿ ಟೀಮ್ ಬೆಂಬಲಿಸುವ ಅಭಿಮಾನಿಗಳು ಮೊದಲ ಶ್ರೇಣಿಯಲ್ಲಿ ಆರ್‌ಸಿಬಿ ಟೀಮ್ ಅನ್ನು ಕಂಡು ಆರಾಧನೆ ಪೂಜೆ ಪುನಸ್ಕಾರಗಳ ಮೂಲಕ ಹರಕೆಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆರ್ ಸಿಬಿ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇದರಂತೆ ರಾಯಚೂರಿನ ಯುವಕ ನರೇಶ್ ಗುಡ್ಸಿ ಆರ್ ಸಿಬಿ ಲಾಂಛನವನ್ನು ಶ್ರೀ ಕೇದಾರನಾಥನ ಸನ್ನಿಧಾನದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿರುವುದು ವಿಶೇಷವಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್