ನವದೆಹಲಿ, 02 ಮೇ (ಹಿ.ಸ.) :
ಆ್ಯಂಕರ್ : ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ 2025ರಲ್ಲಿ ದೊಡ್ಡ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗಿ ಸಂದೀಪ್ ಶರ್ಮಾ ಬೆರಳಿಗೆ ಗಾಯಗೊಂಡ ಕಾರಣದಿಂದ ಟೂರ್ನಿಯ ಉಳಿದ ಭಾಗದಿಂದ ಹೊರಗುಳಿದಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಈವರೆಗೆ ಅವರು 10 ಪಂದ್ಯಗಳಲ್ಲಿ 9 ವಿಕೆಟ್ ಪಡೆದುಕೊಂಡಿದ್ದು, ಎಕಾನಮಿ ದರ 9.89. ಅವರ ಬದಲಿಗೆ ಹೊಸ ಆಟಗಾರನನ್ನು ತಂಡ ಶೀಘ್ರದಲ್ಲೇ ಪ್ರಕಟಿಸಲಿದ್ದು, ಪ್ಲೇಆಫ್ ಹಂತದ ಹೊಸ್ತಿಲಲ್ಲಿರುವ ತಂಡಕ್ಕೆ ಶರ್ಮಾ ಅನುಪಸ್ಥಿತಿ ತೀವ್ರ ಹಿನ್ನಡೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa