ವಿಜಯಪುರ, 09 ಮೇ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕುಂದು ಕೊರತೆಗಳನ್ನು ವಿಚಾರಿಸಲಾಯಿತು.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಬರಗಿ ಅವರು ಜಿಲ್ಲೆಯ ಎಲ್ಲ ತಾಲೂಕಿನ ಪೊಲೀಸ್ ಸಿಬ್ಬಂದಿಗಳನ್ನು ಕರೆಯಿಸಿ ಅವರ ಆಶೋತ್ತರ ಹಾಗೂ ಕುಂದು ಕೊರತೆ ವಿಚಾರಿಸಿದರು.
ಬೇಸಿಗೆ ಬಿಸಿಲಿನ ಸಮಸ್ಯೆ ಸೇರಿದಂತೆ ಹೆಚ್ಚುವರಿ ರಜೆ ಹಾಗೂ ವೈಯಕ್ತಿಕ ಸಮಸ್ಯೆ ಇಂದ ಅವಶ್ಯವಿರುವ ವರ್ಗಾವಣೆ ಬೇಡಿಕೆಗಳನ್ನು ಆಲಿಸಿದರು.
ಗಡಿ ಜಿಲ್ಲೆ ಆಗಿರುವುದರಿಂದ ಭೀಮಾ ತೀರದ ಹಳ್ಳಿಗಳಿಗೆ ಹೊಂದಿಕೊಂಡಿರುವ ಪೊಲೀಸ್ ಚೆಕ್ ಪೊಸ್ಟ್ ಹಾಗೂ ಠಾಣೆಗಳನ್ನು ಮತ್ತಷ್ಟು ಬಲ ಪಡೆಸುವ ನಿಟ್ಟಿನಲ್ಲಿ ಅಗತ್ಯ ಪರಿಕರ ಶಸ್ತ್ರಾಸ್ತ್ರಗಳ ಸಂಗ್ರಹ ಕುರಿತು ಎಸ್ಪಿ ಮಾಹಿತಿ ಪಡೆದರು.
ಇನ್ನು ಸಣ್ಣ ಪುಟ್ಟ ಸಮಸ್ಯೆಗಳನ್ನು ಹೇಳಿದ ಸಿಬ್ಬಂದಿಗೆ ಸ್ಥಳದಲ್ಲೇ ಪರಿಹಾರ ನೀಡುವ ಕೆಲಸ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande