ರೌಡಿಗಳ ಮನೆಗಳ ಮೇಲೆ ಕೆಜಿಎಫ್ ಪೊಲೀಸರ ದಾಳಿ
ರೌಡಿಗಳ ಮನೆಗಳ ಮೇಲೆ ಕೆಜಿಎಫ್ ಪೊಲೀಸರ ದಾಳಿ
ರೌಡಿಗಳ ಮನೆಗಳ ಮೇಲೆ ಕೆಜಿಎಫ್ ಪೊಲೀಸರ ದಾಳಿ


ಕೋಲಾರ ಮೇ. ೦೮ (ಹಿ.ಸ) :

ಆ್ಯಂಕರ್ : ಮುಂಜಾಗೃತಾ ಕ್ರಮವಾಗಿ ಕೆಜಿಎಫ್ ನಗರಲ್ಲಿ ಪೊಲೀಸಲು ರೌಡಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ರೌಡಿಗಳ ಇರುವಿಕೆಯ ಬಗ್ಗೆ ಹಾಗೂ ಅವರುಗಳು ರೌಡಿ ಕೃತ್ಯಗಳಲ್ಲಿ ಸಕ್ರಿಯವಾಗಿರುವ ಕುರಿತು ಪೊಲೀಸರು ಪರಿಶೀಲನೆ ಮಾಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಎಂ.ಶಾ0ತರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ಪಾಂಡುರ0ಗ ಅವರ ನೇತೃತ್ವದಲ್ಲಿ ಮುಂಜಾನೆ ನಡೆದ ದಾಳಿಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಮುಂಜಾನೆ ಏಕಕಾಲದಲ್ಲಿ ರಾಬರ್ಟ್ಸನ್‌ಪೇಟೆ, ಆಂಡ್ರಸನ್‌ಪೇಟೆ ಮತ್ತು ಉರಿಗಾಂ ಪೊಲೀಸ್ ಠಾಣಾ ಸರಹದ್ದುಗಳಲ್ಲಿನ ೨೬ ರೌಡಿ ಆಸಾಮಿಗಳ ಮನೆಗಳ ಮೇಲೆ ೦೭ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ೩೦ ಮಂದಿ ಪೊಲೀಸ್ ಸಿಬ್ಬಂದಿಗಳಿದ್ದ ಆರು ತಂಡಗಳವರು ದಾಳಿ ನಡೆಸಿದರು. ರೌಡಿಗಳು ಇನ್ನೂ ರೌಡಿ ಕೃತ್ಯಗಳಲ್ಲಿ ಸಕ್ರಿಯವಾಗಿರುವ ಕುರಿತು ಪೊಲೀಸರು ಖುದ್ದು ಪರಿಶೀಲನೆ ನಡೆಸಿದರು. ದಾಳಿಯ ಸಮಯದಲ್ಲಿ ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನ ರವಿಕುಮಾರ್ ಎಂಬ ರೌಡಿ ಮನೆಯಲ್ಲಿ ಹರಿತವಾದ ಆಯುಧ ಪತ್ತೆಯಾಗಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ಆತನ ವಿರುದ್ದ ಶಸ್ತಾçಸ್ತç ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ರೌಡಿಗಳು ಯಾವುದೇ ರೀತಿಯ ಕೃತ್ಯಗಳಲ್ಲಿ ಭಾಗವಹಿಸದಂತೆ, ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುವಂತೆ, ಪೊಲೀಸರು ಮುಂಜಾಗೃತ ಕ್ರಮವಾಗಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಖುದ್ದು ಪರಿಶೀಲನೆ ನಡೆಸಿದರು. ಇನ್ನು ಮುಂದೆ ರೌಡಿಗಳು ಏನಾದರೂ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸುತ್ತಿರುವ ಕುರಿತು ಮಾಹಿತಿ ಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande