ಕೊಪ್ಪಳ, 09 ಮೇ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು ರೂ. 05,000 ಗಳ ದಂಡವನ್ನು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೋ) ನ್ಯಾಯಾಲಯ ವಿಧಿಸಿದೆ.
ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಶಹಪುರ ಗ್ರಾಮ ನಿವಾಸಿಯಾದ ಅಪ್ರಾಪ್ತ ವಯಸ್ಸಿನ ಬಾಧಿತಳಿಗೆ ಬಸಾಪುರ ಗ್ರಾಮದ ಭೀಮೇಶ ತಂದೆ ಮಿನಾಲೆಪ್ಪ ಎಂಬಾತನು ಶಹಪುರ ಉರುಸಿಗೆ ಹೋದಾಗ ಬಾಧಿತಳ ಪರಿಚಯವಾಗಿ ಬಾಧಿತಳು ಕಾಲೇಜಿಗೆ ಹೋಗಿ ಬರುವಾಗ ಹಿಂಬಾಲಿಸಿ ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಪುಸಲಾಯಿಸಿ 2022ರ ಆಗಸ್ಟ್ 13 ರಂದು ಸಾಲು ಮರದ ತಿಮ್ಮಕ್ಕ ಪಾರ್ಕನಲ್ಲಿ ಪ್ರಥಮ ಬಾರಿ ಸಂಭೋಗ ಮಾಡಿರುತ್ತಾನೆ.
ನಂತರದಲ್ಲಿ ಆರೋಪಿತನು ಬೇರೆ ಬೇರೆ ಸ್ಥಳಗಳಲ್ಲಿ ಸಂಭೋಗ ಮಾಡಿದ್ದು ಇರುತ್ತದೆ. 2022ರ ಸೆಪ್ಟೆಂಬರ್ 1 ರಂದು ಬಾಧಿತಳು ಕಾಲೇಜಿಗೆಂದು ಕೊಪ್ಪಳಕ್ಕೆ ಹೋಗಿ ಅಲ್ಲಿ ಪರೀಕ್ಷೆ ಬರೆದು ಗಂಗಾವತಿಗೆ ತೆರಳಿ ಯಾರಿಂದಲೋ ರೂ. 500 ಗಳನ್ನು ಫೋನ್ ಪೇ ಮಾಡಿಸಿಕೊಂಡು ಮಂಡ್ಯಕ್ಕೆ ಹೋಗಿ ಅಲ್ಲಿಂದ ಮಳವಳ್ಳಿಗೆ ಹೋಗಿ ಅಲ್ಲಿನ ಒಂದು ನರ್ಸರಿಯಲ್ಲಿ ಹಾಕಿರುವ ಶೆಡ್ಡಿನಲ್ಲಿ ವಾಸವಾಗಿದ್ದು ಆರೋಪಿತನು ರಾತ್ರಿ ವೇಳೆಯಲ್ಲಿ ಬಾಧಿತಳಿಗೆ ಸಂಭೋಗ ಮಾಡಿರುತ್ತಾನೆ.
ಈ ಆರೋಪದ ಹಿನ್ನೆಲೆಯಲ್ಲಿ ಮುನಿರಾಬಾದ ಪೆÇೀಲಿಸರು ದೂರು ಸ್ವೀಕರಿಸಿ ಶ್ರೀದೇವಿ ಸಿಎಚ್‍ಸಿ ಇವರು ಪ್ರಕರಣದ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ ಮುಂದಿನ ತನಿಖೆಯನ್ನು ಕೊಪ್ಪಳ ಸಿಪಿಐ ವಿಶ್ವನಾಥ ಹಿರೇಗೌಡರ ಇವರು ನಿರ್ವಹಿಸಿ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋμÁರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ [ಪೋಕ್ಸೋ) ನ್ಯಾಯಾಲಯದ ಸ್ಪೇ.ಎಸ್‍ಸಿ[ ಪೋಕ್ಸೋ] ಸಂ: 60/2022 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿ ಭೀಮೇಶ ತಂದೆ ಮಿನಾಲೆಪ್ಪ ಬಸಾಪುರ ಇತನ ಮೇಲಿನ ಆರೋಪಣೆಗಳು ಸಾಭೀತಾಗಿದ್ದರಿಂದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.5,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಗೌರವಾನ್ವಿತ ಡಿ.ಕೆ.ಕುಮಾರ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ( ಪೋಕ್ಸೋ) ನ್ಯಾಯಾಲಯ ಕೊಪ್ಪಳ ಇವರು 2025 ಮೇ 5 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ಗೌರಮ್ಮ ಎಲ್. ದೇಸಾಯಿ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಮುನಿರಾಬಾದ ಪೊಲೀಸ್ ಠಾಣೆಯ ಸಿಬ್ಬಂದಿ ಹನುಮಂತಪ್ಪ ಸಿಎಚ್‍ಸಿ-174 ಇವರು ಸಕಾಲಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯದ ಮುಂದೆ ಹಾಜರಪಡಿಸುವಲ್ಲಿ ಸಹಕರಿಸಿರುತ್ತಾರೆ ಎಂದು ವಿ.ಸರ್ಕಾರಿ ಅಭಿಯೋಜಕರು [ ಪೋಕ್ಸೋ), ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್