ಐಪಿಎಲ್ ರದ್ದು ಮಾಡಿ : ಗೋವಿಂದಗೌಡ್ರ ಆಗ್ರಹ
ಗದಗ, 09 ಮೇ (ಹಿ.ಸ.) : ಆ್ಯಂಕರ್ : ದೇಶವು ಯುದ್ಧ ಸನ್ನಿವೇಶವನ್ನು ಎದುರಿಸುತ್ತಿದ್ದು ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯ ಹಾಗೂ ಇತರೆ ಮನೋರಂಜನಾ ಕಾರ್ಯಕ್ರಮಗಳನ್ನು ರದ್ದು ಮಾಡಬೇಕೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ ಗೋವಿಂದಗೌಡ್ರ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಪೋಟೋ


ಗದಗ, 09 ಮೇ (ಹಿ.ಸ.) :

ಆ್ಯಂಕರ್ : ದೇಶವು ಯುದ್ಧ ಸನ್ನಿವೇಶವನ್ನು ಎದುರಿಸುತ್ತಿದ್ದು ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯ ಹಾಗೂ ಇತರೆ ಮನೋರಂಜನಾ ಕಾರ್ಯಕ್ರಮಗಳನ್ನು ರದ್ದು ಮಾಡಬೇಕೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ ಗೋವಿಂದಗೌಡ್ರ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಇ-ಮೇಲ್ ಮುಖಾಂತರ ಅವರು ಮನವಿಯನ್ನು ಮಾಡಿಕೊಂಡಿರುತ್ತಾರೆ. ದೇಶದ ಯೋಧರು ಗಡಿಯಲ್ಲಿ ಪ್ರಾಣದ ಹಂಗನ್ನು ತೊರೆದು ದೇಶ ಕಾಯುತ್ತಿರುವಾಗ ದೇಶದ ನಾಗರಿಕರು ಕ್ರಿಕೆಟ್ ಹಾಗೂ ಇತರ ಮನರಂಜನ ಕಾರ್ಯಕ್ರಮಗಳಲ್ಲಿ ತೊಡಗಿರುವುದು ನಿಜವಾಗಲೂ ವಿಷಾದ ಸಂಗತಿ. ದೇಶಭಕ್ತಿಯನ್ನು ಕ್ರಿಕೆಟ್ ಗೆದ್ದಾಗ ಮಾತ್ರ ತೋರಿಸುವ ನಮ್ಮ ಪ್ರಜೆಗಳು ಇಂತಹ ಸಂದರ್ಭದಲ್ಲಿ ಸೈನಿಕರಿಗೆ ನೈತಿಕ ಧೈರ್ತುಂಬಿ ಅವರೊಂದಿಗೆ ನಾವಿದ್ದೇವೆ ಎಂದು ತೋರಿಸುವ ಅವಶ್ಯಕತೆ ಈಗ ಇದೆ ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಅಭಿಪ್ರಾಯ ಪಟ್ಟಿದ್ದಾರೆ.

ಈ ತಕ್ಷಣದಿಂದ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಮನೋರಂಜನಾ ಕಾರ್ಯಕ್ರಮಗಳು ಹಾಗೂ ಐಪಿಎಲ್ ಪಂದ್ಯಗಳನ್ನು ರದ್ದು ಮಾಡಬೇಕೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನ್ ಗೌಡ ಆರ್ ಗೋವಿಂದಗೌಡ್ರ ಒತ್ತಾಯಿಸಿದ್ದಾರೆ. ದೇಶ ಯುದ್ಧದ ಸನ್ನಿವೇಶವನ್ನು ಎದುರಿಸುತ್ತಿರುವಾಗ ಯೋಧರ ಜೊತೆ ನಾವಿದ್ದೇವೆ ಎಂದು ಸಾರಿ ಸಾರಿ ಹೇಳಬೇಕು ಮನರಂಜನೆ ಹಾಗೂ ಇತರೆ ಪ್ರವಾಸಗಳನ್ನು ಕೈಬಿಡಬೇಕು ಎಂದು ನಾಗರಿಕರಲ್ಲಿ ಬಸವರಾಜ್ ಅಪ್ಪಣ್ಣವರ್, ಪ್ರಫುಲ್ ಪುಣೆಕರ್, ಸಂತೋಷ್ ಪಾಟೀಲ್, ಪುಲಿಕೇಶಿ ಗಾಳಿ, ಜೋಸೆಫ್ ಉದೋಜಿ, ರಮೇಶ್ ಹುಣಿಸೀಮರಾದ, ಎಂ ಎಸ್ ಪಾರ್ವತಗೌಡರ, ದೇಶದ ಪ್ರಜ್ಞಾವಂತ ನಾಗರಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande