ಬೆಂಗಳೂರು, 09 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಸಿಎಆರ್ ಆಡುಗೋಡಿಯ ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಕವಾಯತುವಿನಲ್ಲಿ ನಗರ ಪೊಲೀಸ್ ಪಡೆಯ ಸಾಮರ್ಥ್ಯ ಹಾಗೂ ಬದ್ಧತೆ ಪ್ರದರ್ಶಿಸಲಾಯಿತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ಗೋಪಾಲ ರೆಡ್ಡಿ ವಿ.ಸಿ.ಡಿಸಿಪಿ ಸಿ.ಎ.ಆರ್. ಪಶ್ಚಿಮ ರವರ ನೇತೃತ್ವದಲ್ಲಿ ನಡೆದ ಕವಾಯತುವಿನಲ್ಲಿ ಬೆಂಗಳೂರು ನಗರ ಪೊಲೀಸರ ಘಟಕಗಳನ್ನು ಒಳಗೊಂಡ 10 ತುಕಡಿಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ, ಕಳೆದ ತಿಂಗಳು ಅತ್ಯುತ್ತಮ ಸೇವೆ ಸಲ್ಲಿಸಿದ ವಿವಿಧ ಶ್ರೇಣಿಯ 73 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa