ವಿದ್ಯಾರ್ಥಿನಿಯನ್ನು ಸನ್ಮಾನ ಮಾಡಿದ ಬಿಜೆಪಿ ಮುಖಂಡರು
ಗದಗ, 09 ಮೇ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ನೆರೆಗಲ್ ರವರ ಪುತ್ರಿ ದ್ವಿತೀಯ ಪಿ.ಯು.ವಾಣಿಜ್ಯ ವಿಭಾಗದ ಕುಮಾರಿ ಸನಾ ನಾಸೀರ್ ನರೆಗಲ್ ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಪ್ರತಿಶತ 98.33 ರಷ್ಟು ಅಂಕಗಳನ್ನು ಪ
ಪೋಟೋ


ಗದಗ, 09 ಮೇ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸೀರ್ ನೆರೆಗಲ್ ರವರ ಪುತ್ರಿ ದ್ವಿತೀಯ ಪಿ.ಯು.ವಾಣಿಜ್ಯ ವಿಭಾಗದ ಕುಮಾರಿ ಸನಾ ನಾಸೀರ್ ನರೆಗಲ್ ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಪ್ರತಿಶತ 98.33 ರಷ್ಟು ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇ ರ್ಯಾಂಕ್ ಹಾಗು ಗದಗ ಜಿಲ್ಲೆಗೆ 2ನೇ ರ್ಯಾಂಕ್‍ಗಳಿಸಿದ ವಿದ್ಯಾರ್ಥಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಎಂ.ಎಸ್.ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ಪ್ರಮುಖರಾದ ಸುಧೀರ ಕಾಟಿಗರ, ಅನೀಲ ಅಬ್ಬಿಗೇರಿ, ಮಂಜುನಾಥ ಶಾಂತಗೇರಿ, ರಾಚಯ್ಯ ಹೊಸಮಠ, ನಾಗರಾಜ ತಳವಾರ, ರವಿ ಮಾನ್ವಿ, ಸಂಜೀವಕುಮಾರ ಖಟವಟೆ, ರವಿ ಚವ್ಹಾಣ, ರಾಜು ಕಾಟಿಗರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande