ವಿಜಯಪುರ, 09 ಮೇ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪೊಲೀಸ್ ಚಿಂತನ ಹಾಲಿನಲ್ಲಿ ಉತ್ತರ ಕರ್ನಾಟಕ ಆಟೋ ಯೂನಿಯನ್ ಅಧ್ಯಕ್ಷರ ನೇತೃತ್ವದಲ್ಲಿ ವಿಜಯಪುರ ನಗರದ ಆಟೋರಿಕ್ಷಾ ಚಾಲಕರ ಕುಂದು ಕೊರತೆ ಸಭೆಯನ್ನು ಕೈಕೊಳ್ಳಲಾಯಿತು.
ಆಟೋ ಚಾಲಕರ ಹಾವಳಿ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸಭೆ ಕರೆದಿದ್ದ ಪೊಲೀಸ್ ಇಲಾಖೆ, ನಿಯಮ ಬಾಹಿರವಾಗಿ ಪ್ರಯಾಣಿಕರಿಂದ ಸುಲಿಗೆ ಮಾಡದಂತೆ ಸೂಚಿಸಲಾಗಿದೆ.
ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಬೇಕಾ ಬಿಟ್ಟಿ ಆಟೋ ಓಡಿಸುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಚಾರಿ ನಿಯಮ ಪಾಲಿಸಬೇಕು, ಕುಡಿದು ಆಟೋ ಓಡಿಸುವುದು, ಎಲ್ಲಿ ಬೇಕೆಂದೆಲ್ಲಿ ವಾಹನ ಪಾರ್ಕ್ ಮಾಡುವುದನ್ನು ನಿಲ್ಲಿಸಬೇಕೆಂದು ಸೂಚಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande