ಪ್ರಧಾನಿ ಮತ್ತು ಸೇನಾಧಿಕಾರಿಗಳಿಗೆ ಧನ್ಯವಾದ ತಿಳಿಸಿದ: ಸಿ ಸಿ ಪಾಟೀಲ್
ಗದಗ, 8 ಮೇ (ಹಿ.ಸ.) ಆ್ಯಂಕರ್: ಭಾರತೀಯರು ಹೆಮ್ಮೆ ಪಡುವಂತೆ ಭಾರತೀಯ ಸೈನಿಕರು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ 80ಕ್ಕೂ ಹೆಚ್ಚು ಉಗ್ರರನ್ನು ಸರ್ವನಾಶ ಮಾಡಿ ಆಪರೇಷನ್ ಸಿಂಧೂರ ಯಶಸ್ವಿಗೊಳಿಸಿದ್ದಾರೆ. ಪ್ರಧಾನಿಗಳಿಗೆ ಮತ್ತು ಸೇನಾಧಿಕಾರಿಗಳಿಗೆಅತ್ಯಂತ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿ
ಪೋಟೋ


ಗದಗ, 8 ಮೇ (ಹಿ.ಸ.)

ಆ್ಯಂಕರ್:

ಭಾರತೀಯರು ಹೆಮ್ಮೆ ಪಡುವಂತೆ

ಭಾರತೀಯ ಸೈನಿಕರು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ 80ಕ್ಕೂ ಹೆಚ್ಚು ಉಗ್ರರನ್ನು

ಸರ್ವನಾಶ ಮಾಡಿ ಆಪರೇಷನ್

ಸಿಂಧೂರ ಯಶಸ್ವಿಗೊಳಿಸಿದ್ದಾರೆ.

ಪ್ರಧಾನಿಗಳಿಗೆ ಮತ್ತು ಸೇನಾಧಿಕಾರಿಗಳಿಗೆಅತ್ಯಂತ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಶಾಸಕ ಸಿ ಸಿ ಪಾಟೀಲ

ಹೇಳಿದರು.

ಗದಗ ಜಿಲ್ಲೆ ನರಗುಂದ ಪಟ್ಟಣದ ಶಾಸಕರ

ಗೃಹ ಕಛೇರಿ ಹಾಗೂ ಶಿವಾಜಿ ಮಹಾರಾಜ್

ವೃತ್ತದಲ್ಲಿ ನಡೆದ ಆಪರೇಷನ್

ಸಿಂಧೂರ ಕಾರ್ಯಾಚರಣೆ ವಿಜಯೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು.

ವಿಜಯೋತ್ಸವದ ಮೊದಲು ಸುದ್ಧಿಗೋಷ್ಠಿ ನಡೆಸಿದ ಸಿ ಸಿ ಪಾಟೀಲ ಅವರು, ಏ.22 ರಂದು ಜಮ್ಮು ಕಾಶ್ಮೀರನ ಪಹಲ್ಗಾಮನಲ್ಲಿ ಭಾರತೀಯ

ಪ್ರವಾಸಿಗರ ಪತ್ನಿಯರ ಎದುರಿಗೆ,

ಜಾತಿಯನ್ನು ಕೇಳಿ ಗುಂಡಿಕ್ಕಿ ಕೊಂದ ನಂತರ ಇದನ್ನು ನಿಮ್ಮ ಪ್ರಧಾನಿ ಮೋದಿಗೆ ಹೇಳಿ, ಎಂದ ಉಗ್ರಗಾಮಿಗಳಿಗೆ ಪ್ರಧಾನಿ ಮೋದಿ, ಅಜಿತ್

ದೋವಲ್, ಸೇನಾಧಿಕಾರಿಗಳು 15-20 ಬಾರಿ ಉನ್ನತಮಟ್ಟದ ಸಭೆಗಳನ್ನು ನಡೆಸುತ್ತಾ 70

ಕಿ.ಮೀ ಪಾಕಿಸ್ತಾನ ಒಳಗೆ ನುಗ್ಗಿ 9 ಉಗ್ರರ ಅಡಗುತಾಣಗಳನ್ನು ನಾಶ ಮಾಡಿದ ನಮ್ಮ

ಸೇನೆಯ ಆಪರೇಶನ್ ಸಿಂಧೂರ ಕಾರ್ಯಾಚರಣೆಗೆ

ಧನ್ಯವಾದಗಳು ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande