ಗದಗ, 8 ಮೇ (ಹಿ.ಸ.)
ಆ್ಯಂಕರ್:
ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಸಾಧನೆಯೊಂದಿಗೆ ನೈತಿಕ ಮೌಲ್ಯಗಳ ಅಳವಡಿಕೆಯು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ
ಅತೀ ಅವಶ್ಯಕವಾಗಿದೆ ಎಂದು ಗದಗ ರಾಮಕೃಷ್ಣ ಆಶ್ರಮದ ಪರಮಪೂಜ್ಯ ನಿರ್ಭಯಾನಂದ ಸ್ವಾಮೀಜಿಗಳು ಹೇಳಿದರು.
ಅವರು ಗದಗನ ಕೆ.ಎಲ್.ಇ.ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಆಂತರಿಕ
ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಆಯೋಜಿಸಿದ್ದ ‘ವಿದ್ಯಾರ್ಥಿ ಜೀವನದಲ್ಲಿ ನೈತಿಕ ಮೌಲ್ಯಗಳು’ ಎಂಬ ವಿಷಯದ ಮೇಲೆ ಅವರು
ವಿಶೇಷ ಉಪನ್ಯಾಸ ನೀಡಿದರು. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣವು ಅಪೂರ್ಣವಾದುದು. ವಿಧೇಯತೆ, ಸತ್ಯನಿಷ್ಠೆ, ಕರ್ತವ್ಯ ಬದ್ದತೆ, ಸಹಾನುಭೂತಿ ಈ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಹುಟ್ಟು ಹಾಕಬೇಕಾಗಿದೆ ಎಂದರು.ವಿದ್ಯಾರ್ಥಿ
ಜೀವನವು ಮನುಷ್ಯ ಜೀವನದ ಅತ್ಯಂತ ಮಹತ್ವಪೂರ್ಣ ಘಟ್ಟವಾಗಿದೆ. ಈ ಹಂತದಲ್ಲಿ ನೈತಿಕ ಮೌಲ್ಯಗಳನ್ನು ಅನುಸರಿಸುವುದು,
ಅವಶ್ಯಕವಾಗಿದೆ. ನೈತಿಕ ಮೌಲ್ಯಗಳು
ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮತ್ತು ಉತ್ತಮ ನಾಗರಿಕರಾಗಿ ಬೆಳೆಸುವಲ್ಲಿ
ಸಹಾಯಕವಾಗುತ್ತವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೈತಿಕ ಮೌಲ್ಯವು ತುಂಬಾ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಹಲವಾರು ಉದಾಹರಣೆಗಳು ಮತ್ತು ನಿದರ್ಶನಗಳ
ಮೂಲಕ ವಿದ್ಯಾರ್ಥಿಗಳು ಅಭಿವೃದ್ದಿಯ
ಪಥದಲ್ಲಿ ಸಾಗಲು ಬೇಕಾದ ಮಾರ್ಗದರ್ಶನ ಮಾಡಿದರು. ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ ಪಿ.ಜಿ. ಪಾಟೀಲ್ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿದ್ಯಾರ್ಥಿ ಜೀವನವು
ಮಾನವನ ಜೀವನದ ಅತ್ಯಂತ ಮಹತ್ವಪೂರ್ಣ ಹಂತವಾಗಿದೆ.
ಈ ಹಂತದಲ್ಲಿ ನೈತಿಕ ಮೌಲ್ಯಗಳನ್ನು
ಅನುಸರಿಸುವುದು ಅವಶ್ಯಕವಾಗಿದೆ. ನೈತಿಕ ತತ್ವಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮತ್ತು ಉತ್ತಮ ನಾಗರಿಕರಾಗಿ ಬೆಳೆಯುವಲ್ಲಿ
ಸಹಾಯಕವಾಗುತ್ತವೆ ಎಂದು ಹೇಳಿದರು.
ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ಈಶಣ್ಣ ಮುನವಳ್ಳಿ,
ಶ್ರೀ. ಅಶೋಕ ನಿಲೂಗಲ್ ಮತ್ತು ಶ್ರೀ. ವೀರೇಶ ಕೂಗು ಉಪಸ್ಥಿತರಿದ್ದರು. ಪ್ರೊ. ಜಿ. ವಿಶ್ವನಾಥ ವಂದಿಸಿದರು.
ಶ್ರೀಮತಿ. ಕಲ್ಯಾಣಿ ಹುಳಕುಂದ ಸ್ವಾಗತಿಸಿದರು. ಶ್ರೀಮತಿ. ಬಿ.ಆರ್. ಚಿನಗುಂಡಿ ಪ್ರಾರ್ಥಿಸಿದರು. ಕು.
ರವಿ ಪೂಜಾರ ನಿರೂಪಿಸಿದರು. ಮಹಾವಿದ್ಯಾಲದ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Lalita MP