ಗದಗ, 8 ಮೇ (ಹಿ.ಸ.)
ಆ್ಯಂಕರ್: ಯುವಕರಲ್ಲಿ ವ್ಯಸನಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದರು.
ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವುಂಡಿ
ಗ್ರಾಮದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ 2024-25 ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಗ್ರಾಮೀಣ ವಾಸ್ತವ್ಯ ಮತ್ತು ಅಧ್ಯಯನದ ಭಾಗವಾಗಿ ಮೇವುಂಡಿ ಗ್ರಾಮದ ರಂಗಮಂದಿರದಲ್ಲಿ ಯುವಕರಲ್ಲಿ ವ್ಯಸನಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪ್ರಾರ್ಥನ ಗೀತೆ ಹೇಳುವ ಮೂಲಕ ವೀಣಾ ಮತ್ತು ಸಂಗಡಿಗರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ
ಉಪನ್ಯಾಸಕರಾದ ಡಾ. ಲಿಂಗರಾಜ್ ನಿಡುವಣಿಯವರು ಗ್ರಾಮ ವಾಸ್ತವ್ಯ ಮತ್ತು ಅಧ್ಯಯನದ ಮುಖ್ಯ ಉದ್ದೇಶ ಮತ್ತು ಗುರಿಗಳ ಬಗ್ಗೆ ತಿಳಿಸಿದರು ಮತ್ತು ವಿಶ್ವವಿದ್ಯಾಲಯದ ಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ಮತ್ತು ಉಪನ್ಯಾಸಕರಾಗಿ ಆಗಮಿಸಿದ ಸಂಸ್ಕಾರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ, ಗದಗ ನ ಆಪ್ತ ಸಮಾಲೋಚಕರಾದ ಬಸವರಾಜ್ ಅವರು ಯುವಕರಲ್ಲಿ ವ್ಯಸನಗಳ ಕುರಿತು ಮಾತನಾಡಿದರು ಕುಡಿತದ ಕಾರಣಗಳು ಮತ್ತು ಕುಡಿತದಿಂದ ಆಗುವ ಪರಿಣಾಮಗಳ ಕುರಿತು ಮಾತನಾಡಿದರು.
ಯುವಕರು ಜೀವನದಲ್ಲಿ ನಿರ್ದಿಷ್ಟ ಗುರಿ
ಹೊಂದಿರಬೇಕು ಅದಕ್ಕಾಗಿ ಗುರಿಯಡೆಗೆ
ಹೆಜ್ಜೆ ಇಡಬೇಕು ಎಂದು ಯುವಕರನ್ನು
ಕುರಿತು ಮಾತನಾಡಿದರು.ಕಾರ್ಯಕ್ರಮಕ್ಕೆ ಮತ್ತೊರ್ವ ಅತಿಥಿಗಳಾಗಿ ಅಂದಪ್ಪ ಹಾರೋಗೇರಿ ಸ್ವಾಮಿ ವಿವೇಕಾನಂದ ರಾಜ್ಯ ಯುವ
ಪ್ರಶಸ್ತಿ ಪುರಸ್ಕೃತರು ಇವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇವರು ಯುವಕರನ್ನು ಕುರಿತು ಯುವಕರು
ನಮ್ಮ ದೇಶದ ಶಕ್ತಿ ಯುವಕರು ಎಲ್ಲಾ
ವ್ಯಸನಗಳಿಂದ ಮುಕ್ತರಾಗಿ ಗ್ರಾಮ
ಅಭಿವೃದ್ಧಿಗೆ ಶ್ರಮಿಸಬೇಕು ಎಂದು
ಮಾತನಾಡಿದರು ಯುವಕರು ನಾಯಕತ್ವ
ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು
ಯುವಕರನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಊರಿನ ಹಿರಿಯ ಮುಖಂಡರಾದ ಮೊದಲಿಂಗಪ್ಪ ಕೊರಲಹಳ್ಳಿ ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚನ್ನಪ್ಪ ಕುಂಬಳೆ, ಈಶಪ್ಪ ಸಿಡ್ನಿಕೊಪ್
ಎಸ್ ಟಿ ಘಟಕ ಅಧ್ಯಕ್ಷರು ಮತ್ತು
ಊರಿನ ಗುರು ಹಿರಿಯರು ಮತ್ತು
ಮೇವುಂಡಿ ಗ್ರಾಮದ ಯುವ ಸಮಿತಿಗಳು
ಮತ್ತಿತರರು ಇದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಮೇಘ ಮನ್ನಣ್ಣವರ್ ಮತ್ತು ಕಾರ್ಯಕ್ರಮದ
ವಂದನಾರ್ಪಣೆಯನ್ನು ಕುಮಾರಿ ಮನೋಹರಿ ಉಪ್ಪಿನ್ ಅವರು ನಡೆಸಿಕೊಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / Lalita MP