ಮೇ 9 ರಂದು ವಿಕ್ಕಿ ಚಲನಚಿತ್ರ ಬಿಡುಗಡೆ
ಗದಗ, 06 ಮೇ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕ ಹಾಗೂ ರಂಗಭೂಮಿ ಪ್ರತಿಭೆಗಳನ್ನೊಳಗೊಂಡ ವಿಕ್ಕಿ ಚಲನಚಿತ್ರ ಮೇ 9 ರಂದು ರಾಜ್ಯಾದ್ಯಂತ ಬಿಡುಗಡೆಗೊಳಲಿದ್ದು, ರಂಗ ಭೂಮಿಯಲ್ಲಿ ಹರಸಿ ಹಾರೈಸಿದಂತೆ ವಿಕ್ಕಿ ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಶುಭ ಹಾರೈಸಬೇಕು ಎಂದು ಚಿತ್ರದ ನಾಯಕ ನಟ ಭರತ್ ತಾಳಿಕೋಟಿ ಮನವಿ
ಪೋಟೋ


ಗದಗ, 06 ಮೇ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕ ಹಾಗೂ ರಂಗಭೂಮಿ ಪ್ರತಿಭೆಗಳನ್ನೊಳಗೊಂಡ ವಿಕ್ಕಿ ಚಲನಚಿತ್ರ ಮೇ 9 ರಂದು ರಾಜ್ಯಾದ್ಯಂತ ಬಿಡುಗಡೆಗೊಳಲಿದ್ದು, ರಂಗ ಭೂಮಿಯಲ್ಲಿ ಹರಸಿ ಹಾರೈಸಿದಂತೆ ವಿಕ್ಕಿ ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಶುಭ ಹಾರೈಸಬೇಕು ಎಂದು ಚಿತ್ರದ ನಾಯಕ ನಟ ಭರತ್ ತಾಳಿಕೋಟಿ ಮನವಿ ಮಾಡಿದರು.

ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ನಾಲ್ಕೈದು ಚಲನಚಿತ್ರದಲ್ಲಿ ಸಣ್ಣ-ಪುಟ್ಟ ಪಾತ್ರದ ಮೂಲಕ ಅಭಿನಯ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ವಿಕ್ಕಿ ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಅಭಿಮಾನಿಗಳ ಹಾಗೂ ಪ್ರೇಕ್ಷಕರ ಶುಭ ಹಾರೈಕೆ ಅತೀ ಮುಖ್ಯವಾಗಿದ್ದು, ಚಲನಚಿತ್ರ ಯಶಸ್ವಿಗೊಳ್ಳುವ ವಿಶ್ವಾಸವಿದೆ. ಕನಸು ಬೆನ್ನತ್ತಿ ಹೋಗುವ ಯುವಕ ಗುರಿ ತಲುಪುವ ಆಯಾಮವನ್ನು ಹಾಸ್ಯದ ಮೂಲಕ ಚಲನಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರಿಕರಣ ನಡೆದಿದೆ. ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನವನೀತ ಲಕ್ಷ್ಮಿ ಚಿತ್ರದ ನಿರ್ಮಾಪಕರಾಗಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ದೀಪಕ್ ಎಸ್ ಅವಂದಕರ್ ಮಾಡಿದ್ದಾರೆ. ಹೆಸರಾಂತ ಬಹುಮುಖ ಪ್ರತಿಭೆಗಳು ತೆರೆಯ ಹಿಂದೆ ಕೆಲಸ ಮಾಡಿದ್ದು, ಪ್ರೇಕ್ಷಕರು ಕಲಾವಿದರನ್ನು ಕೈ ಹಿಡಿಯಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಕಾಮಿಡಿ ಕಿಲಾಡಿ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ಒದಗಿ ಬಂದಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದೇವೆ. ಆದರೆ, ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ರಂಗಭೂಮಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಸಿನಿಮಾ ಬಿಡುತ್ತೇವೆ ಹೊರತೂ ರಂಗಭೂಮಿ ಬಿಡುವುದಿಲ್ಲ. ಸಾವು ಬಂದರೂ, ರಂಗಭೂಮಿಯಲ್ಲಿ ನಟನೆ ಮಾಡಿ ಸಾಯುತ್ತೇವೆ ವಿನಃ ರಂಗಭೂಮಿಯಿಂದ ದೂರ ಉಳಿಯುವುದಿಲ್ಲ ಎಂದು ಕಲಾವಿದ ಹರೀಶ ಹಿರಿಯೂರ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande