ಕವಿಯ ಕಲ್ಪನೆಯೇ ಪರ್ಯಾಯ : ಡಾ. ಸುಜಾತ ಜಂಗಮಶೆಟ್ಟಿ
ಬಳ್ಳಾರಿ, 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕವಿಯ ಕಲ್ಪನೆಯೇ ಪರ್ಯಾಯ ಪ್ರಪಂಚದ ಸೃಷ್ಠಿ ಎಂದು ಕಲಬುರ್ಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿ. ಕಗ್ಗಲ್‍ನ ರಂಗ ಜಂಗಮ ಸಂಸ್ಥೆ, ಶ್ರೀಮತಿ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ
ಕವಿಯ ಕಲ್ಪನೆಯೇ ಪರ್ಯಾಯ : ಡಾ. ಸುಜಾತ ಜಂಗಮಶೆಟ್ಟಿ


ಬಳ್ಳಾರಿ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕವಿಯ ಕಲ್ಪನೆಯೇ ಪರ್ಯಾಯ ಪ್ರಪಂಚದ ಸೃಷ್ಠಿ ಎಂದು ಕಲಬುರ್ಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿ. ಕಗ್ಗಲ್‍ನ ರಂಗ ಜಂಗಮ ಸಂಸ್ಥೆ, ಶ್ರೀಮತಿ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಆದಿವಾಸಿ ಸಾಹಿತ್ಯ ಕಲೆ ಮತ್ತು ಸಂಶೋಧನಾ ಟ್ರಸ್ಟ್‍ನ ಸಹಯೋಗದಲ್ಲಿ ಎನ್.ಶಾಂತನಾಯಕ ಅವರ ಕಾವ್ಯದಲ್ಲಿ `ದಲಿತರ ಮತ್ತು ಬುಡಕಟ್ಟು ಸಮುದಾಯಗಳ ತಳಮಳಗಳು' ವಿಷಯದ

ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲಾ ಕಲೆಗಳು ಮುಂದಿನ ಪೀಳಿಗೆಗೆ ತಲುಪಬೇಕು. ಯುವ ಪೀಳಿಗೆಯು ರಂಗಭೂಮಿ, ಸಂಗೀತ ಇನ್ನಿತರೆ ಕಲೆಗಳನ್ನು ಜೀವಂತವಾಗಿ ಇರಿಸಲು ಹೆಚ್ಚಿನ ಆಸಕ್ತಿ ತೋರಿಸಬೇಕು. ವಿದ್ಯಾರ್ಥಿಗಳು ಪುಸ್ತಕಸ್ನೇಹಿ ಆಗಿ ಮಸ್ತಕಕ್ಕೆ ಹೆಚ್ಚಿನ ಜ್ಞಾನವನ್ನು ತಲುಪಿಸಬೇಕು. ಶಾಲಾ - ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು ಎಂದರು.

ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಡಾ. ದೇವರಿಂಟಿ ಸುಧಾಕರ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಪ್ರೊ. ಎನ್. ಶಾಂತನಾಯಕ ಅವರ ಎಲ್ಲಾ ಕಥೆ, ಕವನ, ನಾಟಕ, ಹಾಡು, ಗಝಲ್‍ಗಳನ್ನು ಪುಸ್ತಕ ರೂಪ ನೀಡುತ್ತಿರುವುದು ಶ್ಲಾಘನೀಯ ಎಂದರು.

ಡಾ. ಸೋಮಶೇಖರ ಎಂ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಎನ್. ಶಾಂತನಾಯಕ ಅವರ `ಆ ದಿನಗಳ ಮಾತು ಈಗ್ಹೇಕೆ?' ಕವನ ಸಂಕಲನದ ಕುರಿತು ಡಾ. ಅರನಕಟ್ಟೆ ರಂಗನಾಥ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.

ಕನ್ನಡ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಪ್ರಾರ್ಥನೆ ಸಲ್ಲಿಸಿದರು. ಡಾ. ವೇದಾಂತ್ ಎಂ ಅವರು ಸ್ವಾಗತ ಕೋರಿದರು.

ಉಪನ್ಯಾಸಕ ಡಾ. ಬಸವರಾಜ ಅವರು ಕಾರ್ಯಕ್ರಮ ನಿರೂಪಿಸಿದರು. ವಿಷ್ಣು ಹಡಪದ ಅವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ಸಂಚಾಲಕರಾದ ಡಾ. ಅಣ್ಣಾಜಿ ಜಿ. ಕೃಷ್ಣಾರೆಡ್ಡಿ, ಕಾಳಿಂಗ ಕನ್ನಡ ವಿಭಾಗದ ಉಪನ್ಯಾಸಕರಾದ ಗಿರಿರಾಜಪ್ಪ, ಹೆಚ್. ಹುಲಿಕುಂಟೇಶ್ವರ, ವಿ. ಹನುಮಂತಪ್ಪ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande