ಬಳ್ಳಾರಿ ಸೊಗಡಿನ ಅಮರ ಪ್ರೇಮಿ ಅರುಣ್ ಚಿತ್ರ ನೋಡಿ ಪ್ರೋತ್ಸಾಹಿಸಿ : ನಿರ್ದೇಶಕ
ಬಳ್ಳಾರಿ, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಭಾಷೆ, ಭಾವನೆ, ಸಂಭಾಷಣೆ ಮತ್ತು ಹಾಡುಗಳ ಜೊತೆಗೆ ಸ್ಥಳೀಯ ಸಾಂಪ್ರದಾಯಿಕ ಸೊಗುಡಿನಿಂದ ಅಮರ ಪ್ರೇಮಿ ಅರುಣ್ ಎಂಬ ಚಲನಚಿತ್ರವನ್ನು ಬಹಳ ಶ್ರಮಪಟ್ಟು ನಿರ್ಮಿಸಿದ್ದೇವೆ ಬಳ್ಳಾರಿ ಜನತೆ ಚಲನಚಿತ್ರವನ್ನು ನಗರದ ಉಮಾ ಚಿತ್ರಮಂದಿರದಲ್ಲಿ ವೀಕ್
ಬಳ್ಳಾರಿ ಸೊಗಡಿನ  ಅಮರ ಪ್ರೇಮಿ ಅರುಣ್ ಚಿತ್ರ ನೋಡಿ ಪ್ರೋತ್ಸಾಹಿಸಿ  : ನಿರ್ದೇಶಕ


ಬಳ್ಳಾರಿ ಸೊಗಡಿನ  ಅಮರ ಪ್ರೇಮಿ ಅರುಣ್ ಚಿತ್ರ ನೋಡಿ ಪ್ರೋತ್ಸಾಹಿಸಿ  : ನಿರ್ದೇಶಕ


ಬಳ್ಳಾರಿ, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಭಾಷೆ, ಭಾವನೆ, ಸಂಭಾಷಣೆ ಮತ್ತು ಹಾಡುಗಳ ಜೊತೆಗೆ ಸ್ಥಳೀಯ ಸಾಂಪ್ರದಾಯಿಕ ಸೊಗುಡಿನಿಂದ ಅಮರ ಪ್ರೇಮಿ ಅರುಣ್ ಎಂಬ ಚಲನಚಿತ್ರವನ್ನು ಬಹಳ ಶ್ರಮಪಟ್ಟು ನಿರ್ಮಿಸಿದ್ದೇವೆ ಬಳ್ಳಾರಿ ಜನತೆ ಚಲನಚಿತ್ರವನ್ನು ನಗರದ ಉಮಾ ಚಿತ್ರಮಂದಿರದಲ್ಲಿ ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಮತ್ತು ನಿರ್ಮಾಪಕರನ್ನು ಪ್ರೋತ್ಸಾಹಿಸಬೇಕೆಂದು ಅಮರ ಪ್ರೇಮಿ ಅರುಣ್ ಚಲನಚಿತ್ರದ ನಿರ್ದೇಶಕರು ಮತ್ತು ಸಾಹಿತಿಗಳು ಹಾಗೂ ಎಡೆ ಕೃತಿಯ ಕರ್ತೃವಾದ ಪ್ರವೀಣ್ ಕುಮಾರ್ ಮನವಿ ಮಾಡಿದರು.

ಅವರು ಇಡೀ ಚಿತ್ರದ ತಂಡದೊಂದಿಗೆ ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಬಳ್ಳಾರಿ ಜಿಲ್ಲೆಯವನೇ ಆದ ನನಗೆ ಬಳ್ಳಾರಿ ಸೊಗಡನ್ನು ಚಿತ್ರದಲ್ಲಿ ಬಳಸಿಕೊಳ್ಳಲು ನನಗೆ ತೊಂದರೆ ಆಗಲಿಲ್ಲ. ಈ ಹಿಂದೆ ನಾನು ಹಲವು ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದೇನೆ, ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಮತ್ತು ಕೂರ್ಮಾವತಾರ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ, ಆ ಎಲ್ಲಾ ಅನುಭವವನ್ನು ದಾರಿ ಏರಿದು ಅಮರ ಪ್ರೇಮಿ ಅರುಣ್ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದೇನೆ.

ಈ ಚಿತ್ರವನ್ನು ಬಳ್ಳಾರಿಯಲಿ 54 ದಿನಗಳ ಕಾಲ ಸಂಗನಕಲ್ಲು ಮಿಂಚೇರಿ ಹಲಕುಂದಿ ಸಿರವಾರ, ದುರ್ಗಮ್ಮ ದೇವಸ್ಥಾನ ಕಾಗೆ ಪಾರ್ಕ್ ಸೇರಿದಂತೆ ಬಳ್ಳಾರಿ ಬೆಟ್ಟದಲ್ಲಿಯೂ ಸಹ ಚಿತ್ರೀಕರಣ ನಡೆಸಲಾಗಿದೆ ಇದರಿಂದ ಸಂಪೂರ್ಣವಾಗಿ ಬಳ್ಳಾರಿಯೇ ಚಿತ್ರದಲ್ಲಿ ಇದೆ ಎಂಬಂತೆ ಭಾಸವಾಗುತ್ತದೆ ಎಂದರು.

ಈ ಚಲನಚಿತ್ರ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ ದಯವಿಟ್ಟು ಬಳ್ಳಾರಿಯ ಜನತೆ ಈ ಚಿತ್ರವನ್ನು ಉಮಾ ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕೆಂದು ಬಳ್ಳಾರಿ ಜನತೆಯಲ್ಲಿ ಮನವಿ ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗಿ, ಸಹ ನಿರ್ಮಾಪಕ ಮಂಡ್ಯ ಮಂಜು, ಚಿತ್ರದ ನಾಯಕ ಹರಿಶಾರ್ವ್, ನಾಯಕಿ ದೀಪಿಕಾ ಆರಾಧ್ಯ, ಸಹ ನಾಯಕಿ ಕೃತಿ ಭಟ್, ಪ್ರವೀಣ್, ಪ್ರದೀಪ್ ಕುಮಾರ್ ಸೇರಿದಂತೆ ಹಲವರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande