ಬಾಗಲಕೋಟೆ, 04 ಮೇ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಮಹಿಳೆ, ಮೀಟರ್ ಬಡ್ಡಿದಾರರ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸೀರದೇವಿ ಸುಖದೇವ್ ಪಾನಕನವರ ಎಂದು ಗುರ್ತಿಸಲಾಗಿದೆ.
ಕುಟುಂಬ ನಿರ್ವಹಣೆ ಹಿನ್ನೆಲೆಯಲ್ಲಿ ಅದೇ ಗ್ರಾಮದ ಲಕ್ಕಪ್ಪ ಅಟ್ಟಾಳ ಎನ್ನುವವರ ಹತ್ತಿರ 20 ಸಾವಿರ ರೂ. ಸಾಲ ಪಡೆದಿದ್ದರು.
ಅದಕ್ಕೆ ಆ ವ್ಯಕ್ತಿ ಒಂದು ಲಕ್ಷ ಐವತ್ತು ಸಾವಿರ ಬಡ್ಡಿಯನ್ನು ಸೇರಿಸಿ ಸಾಲವನ್ನು ಕಟ್ಟುವಂತೆ ಅವರಿಗೆ ಕಿರಕುಳ ನೀಡುತ್ತಿದ್ದರು ಎನ್ನಲಾಗಿದೆ.
ಅದು ಅಲ್ಲದೇ ಆ ಮಹಿಳೆಯ ಆಲಗೂರ ಆರ್.ಸಿ ಯಲ್ಲಿರುವ ಪ್ಲಾಟನ್ನು ಮಾರಿ ಕೊಡುವದಾಗಿ ಎಂದು ಸುಮಾರು ೧೦ ಲಕ್ಷ ೪೦ ಸಾವಿರ ಹಣಕ್ಕೆ ಮಾರಾಟ ಮಾಡುವದಾಗಿ ನಂಬಿಸಿ ಮಹಿಳೆಗೆ ೧ಲಕ್ಷ ಮಾತ್ರ ನೀಡಿ ಉಳಿದ ಹಣವನ್ನು ತಾನೆ ತಗೆದುಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಮಹಿಳೆ ಹಣವನ್ನು ಕೇಳಲು ಹೋದಲ್ಲಿ ಯಾವ ಹಣ, ನಿನಗೆ ಎಲ್ಲ ಕೊಟ್ಟಿದ್ದೀನಿ ಎಂದು ಮೋಸ ಮಾಡಿದ್ದಾನೆ ಎಂದು ನೊಂದ ಮಹಿಳೆ ಮನೆಯಲ್ಲಿದ್ದ ಯಾವುದೊ ಮಾತ್ರೆಯನ್ನು ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಮಹಿಳೆಯನ್ನ ಜಮಖಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಹಿಳೆ ಪ್ರಾಣಾಪಾಯಾದಿಂದ ಪಾರಾಗಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande