ಗದಗ, 03 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಒಂದೇ ದಿನದಲ್ಲಿ ಎರಡು ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿವೆ.
ಕೀರ್ತನ ಕೊಡ್ಲಿ ಸೇರಿದಂತೆ ಹಲವರು ಅಕ್ಕಿಗುಂದ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ, ಬಸ್ ಹತ್ತುವ ಸಮಯದಲ್ಲಿ ಕಳ್ಳರು, ತಮ್ಮ ಕೈಚಳಕದಿಂದ ಮಹಿಳೆಯರ ಕೊರಳಲ್ಲಿ ಇದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ.
ಬಸ್ ನಿಲ್ದಾಣದಲ್ಲಿ ಪೊಲೀಸರು ಹಾಜರಿದ್ದರೂ ಈ ರೀತಿಯ ಸರಗಳ್ಳತನ ನಡೆದಿದೆ. ಸಾರ್ವಜನಿಕರು ಕಳವಿನಿಂದ ಬೆಚ್ಚಿಬಿದ್ದಿದ್ದು, ಪೊಲೀಸರ ಮೇಲಿನ ನಂಬಿಕೆಗೆ ಬಿರುಕು ಬೀರುವಂತಹ ಸ್ಥಿತಿ ಉಂಟಾಗಿದೆ.
ಘಟನೆ ಬಗ್ಗೆ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದರೊಂದಿಗೆ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ವಿನಂತಿಸಿದ್ದಾರೆ.
ಮಹಿಳೆಯರ ಭದ್ರತೆಗೆ ಪ್ರಶ್ನೆಯುಂಟುಮಾಡಿದ ಈ ಸರಗಳ್ಳತನ, ಪೊಲೀಸರು ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಈ ಸರ ಕಳ್ಳತನ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP